ಬಾಯಲ್ಲಿ ನೀರೂರಿಸೋ ಬಗೆಬಗೆ ಪಾಯಸ

ಹಬ್ಬ, ಪೂಜೆ, ಶುಭ ಸಮಾರಂಭಗಳಲ್ಲಿ ಪಾಯಸಕ್ಕೆ ವಿಶೇಷ ಆದ್ಯತೆ. ಅಕ್ಕಿ, ಹೆಸರು ಬೇಳೆ, ಕಡಲೆ ಬೇಳೆ, ರವೆ, ಗೋಧಿ ನುಚ್ಚು, ಶಾವಿಗೆ ಹೀಗೆ ಬಗೆ ಬಗೆ ಪಾಯಸ ವಿಧಗಳಲ್ಲಿ ಒಂದು ಬಗೆಯ ಪಾಯಸ ಇದ್ದೇ ಇರುತ್ತದೆ. ಸಾಮಾನ್ಯವಾಗಿ ಹೆಚ್ಚಿನವರಿಗೆ ಇಷ್ಟವಾಗುವ ಸಿಹಿ ಖಾದ್ಯ. ಲಕ್ಷ್ಮಿ ದೇವಿಗೆ ಪಾಯಸದ ನೈವೇದ್ಯ ಮಾಡುವುದು ರೂಢಿ.

ಖೀರ್ ಪಾಯಸ

ಬೇಕಾಗುವ ಸಾಮಗ್ರಿಗಳು: ಹಾಲು ಎರಡು ಲೀಟರ್, ಖೀರ್ 200ಗ್ರಾಂ, ತುಪ್ಪ 1 ಚಮಚ, ಸಕ್ಕರೆ 200 ಗ್ರಾಂ, ಒಣದ್ರಾಕ್ಷಿ, ಗೋಡಂಬಿ, ಸ್ವಲ್ಪ, ಕೇಸರಿ ದಳಗಳು, ಕತ್ತರಿಸಿದ ಬಾದಾಮಿ, ಏಲಕ್ಕಿ ಪುಡಿ ಸ್ವಲ್ಪ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದರಲ್ಲಿ ಖೀರ್‌ನ್ನು ಹುರಿದಿಟ್ಟುಕೊಳ್ಳಿ. ಅದೇ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ದ್ರಾಕ್ಷಿಯನ್ನು ಹುರಿದುಕೊಳ್ಳಿ. ಹಾಲು ಬಿಸಿ ಮಾಡಿಕೊಂಡು ಅದಕ್ಕೆ ಹುರಿದಿಟ್ಟುಕೊಂಡಿರುವ ಖೀರ್‌ನ್ನು ಹಾಕಿ. ಮಧ್ಯಮ ಉರಿಯಲ್ಲಿ ಬೇಯಿಸಿ. ನಂತರ ಸಕ್ಕರೆ ಸೇರಿಸಿ, ಮಿಶ್ರಣ ಮಾಡಿ. ಅದಕ್ಕೆ ಹುರಿದಿಟ್ಟುಕೊಂಡಿರುವ ಗೋಡಂಬಿ, ದ್ರಾಕ್ಷಿಯನ್ನು ಹಾಕಿ ಮಿಶ್ರಣ ಮಾಡಿ.

ಕ್ಯಾರೆಟ್ ಪಾಯಸ


ಬೇಕಾಗುವ ಸಾಮಗ್ರಿ: ಅರ್ಧ ಲೀಟರ್ ಗಟ್ಟಿ ಹಾಲು, 2-3 ಸ್ವಲ್ಪ ದೊಡ್ಡ ಗಾತ್ರದ ಕ್ಯಾರೆಟ್, 10ಗೋಡಂಬಿ, ಬಾದಾಮಿ 8 (ನೀರಿನಲ್ಲಿ ನೆನೆ ಹಾಕಿರಿ)ಅರ್ಧ ಚಮಚ ಏಲಕ್ಕಿ ಪುಡಿ, ಒಂದು ಚಮಚ ತುಪ್ಪ, ಸ್ವಲ್ಪ ಕೇಸರಿ.

ತಯಾರಿಸುವ ವಿಧಾನ: ಹಾಲು ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ. ಒಂದು ಬದಿಯಲ್ಲಿಡಿ. ನಂತರ ಬೇರೆ ಪಾತ್ರೆಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿಯನ್ನು ಹಾಕಿ ೪-೫ ನಿಮಿಷ ಹುರಿದುಕೊಳ್ಳಿ. ನಂತರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಬಾದಾಮಿ ಸಿಪ್ಪೆ ಸುಲಿದು ಅದನ್ನು ಕ್ಯಾರೆಟ್ ಜೊತೆ ಹಾಕಿ ಕುದಿಸಿ ಮಂದವಾಗಿಸಿದ ಹಾಲಿನಿಂದ ಕಾಲು ಕಪ್ ಹಾಲನ್ನು ಹಾಕಿ ೭-೮ ನಿಮಿಷ ಸೌಟ್‌ನಿಂದ ಆಡಿಸುತ್ತಾ ಕುದಿಸಿ. ಅದು ತಣ್ಣಗಾದ ನಂತರ ಕ್ಯಾರೆಟ್, ಬಾದಾಮಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಹಾಲನ್ನು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆ ಹಾಕಿ, ರುಬ್ಬಿದ ಕ್ಯಾರೆಟ್ ಹಾಕಿ ಸೌಟ್‌ನಿಂದ ಮಿಕ್ಸ್ ಮಾಡುತ್ತಾ ೫ ನಿಮಿಷ ಕುದಿಸಬೇಕು. ನಂತರ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ.

ರವೆ ಪಾಯಸ
ಬೇಕಾಗುವ ಸಾಮಾಗ್ರಿಗಳು:
ಬಾಂಬೆ ರವೆ 100 ಗ್ರಾಂ., ಸಕ್ಕರೆ 100 ಗ್ರಾಂ, ತುಪ್ಪ 4 ಚಮಚ, ಹಾಲು 1ಲೋಟ.
ಮಾಡುವ ವಿಧಾನ: ಬಾಣಲೆಯಲ್ಲಿ ಬಾಂಬೆ ರವೆ ಹಾಕಿ ತುಪ್ಪದಲ್ಲಿ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ ಬೇಯಿಸಿ ಒಂದು ಲೋಟದಷ್ಟು ನೀರನ್ನು ಹಾಕಿ ಕುದಿಸಿ. ರವೆ ಬೆಂದ ನಂತರ ಸಕ್ಕರೆಯನ್ನು ಹಾಕಿ ಚೆನ್ನಾಗಿ ಕುದಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles