ದೇಶಭಕ್ತಿ ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆ

ಬೆಂಗಳೂರು: ನಗರದ ವಿದ್ಯಾಪೀಠದ ಬಳಿಯಿರುವ ಶ್ರೀ ವಿವೇಕಾನಂದ ಕಲಾ ಕೇಂದ್ರದ `ಸಂಸ್ಕೃತಿ ಸದನ’ ಸಭಾಂಗಣದಲ್ಲಿ 72ನೇ ಗಣರಾಜ್ಯೋತ್ಸವದ ಅಂಗವಾಗಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯ ಪ್ರಕಾಶನಕ್ಕೆ ಮತ್ತು ದೇಶಭಕ್ತಿ ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿಲಾಗಿತ್ತು. ಕರೋನಾ ಭೀತಿಯಿಂದ ಹೊರಬಂದು ವಿದ್ಯಾರ್ಥಿಗಳು ಉತ್ಸಾಹಭರಿತರಾಗಿ ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾದ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡುತ್ತ, ಸುವರ್ಣ ಮಹೋತ್ಸವದತ್ತ ಮುನ್ನೆಡೆದಿರುವ ಶ್ರೀ ವಿವೇಕಾನಂದ ಕಲಾ ಕೇಂದ್ರವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ,ರಾಷ್ಟçಭಕ್ತಿ- ಸಂಸ್ಕೃತಿ ಪೋಷಣೆಯ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಡಾ. ಮುರಳೀಧರ್, ಡಾ. ಶ್ವೇತ, ಶ್ರೀವಿವೇಕಾನಂದಮೂರ್ತಿ, ಪ್ರೊ. ರಾಜೀವ್ ಹಾಗೂ ಕಲಾಕೇಂದ್ರದ ಕಾರ್ಯದರ್ಶಿಗಳಾದ ಡಾ. ವಿ. ನಾಗರಾಜ್ ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles