ಸೋರೆಕಾಯಿಯಿಂದಲೂ ಮಾಡಬಹುದು ಲಡ್ಡು

ಸೋರೆಕಾಯಿ ಆರೋಗ್ಯಕ್ಕೂ ಒಳ್ಳೆಯದು. ಡಯೆಟ್ ಮಾಡುವವರು ಕೂಡಾ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಸೋರೆಕಾಯಿಯಿಂದ ಜ್ಯೂಸ್, ಪಲ್ಯ, ಗೊಜ್ಜು, ಸಾಂಬಾರ್, ಹುಳಿ, ದೋಸೆ ಹೀಗೆ ಬಗೆಬಗೆ ಖಾದ್ಯಗಳನ್ನು ಮಾಡಬಹುದು. ಅಷ್ಟು ಮಾತ್ರವಲ್ಲ ಸೋರೆಕಾಯಿ ಹಾಗೂ ರವೆಯನ್ನು ಬಳಸಿ ಸಿಹಿಯಾದ ಲಡ್ಡು ಕೂಡಾ ಮಾಡಬಹುದು. ಹೇಗೆ ಮಾಡೋದು ಅನ್ನೋ ರೆಸಿಪಿ ಇಲ್ಲಿದೆ.


ಸೋರೆಕಾಯಿ ಲಡ್ಡು
ಬೇಕಾಗುವ ಸಾಮಗ್ರಿ: ಸೋರೆಕಾಯಿ (ತುರಿದದ್ದು)-200 ಗ್ರಾಂ, ಬೆಲ್ಲ-200ಗ್ರಾಂ, ಒಂದು ಕಪ್ ರವೆ, ಕೊಬ್ಬರಿ ಪೌಡರ್-200 ಗ್ರಾಂ, ತುಪ್ಪ-2ಚಮಚ, ಉಪ್ಪು-ಚಿಟಿಕೆಯಷ್ಟು, ಏಲಕ್ಕಿ ಪುಡಿ-1/4ಚಮಚ.

ಮಾಡುವ ವಿಧಾನ: ಬಾಣಲೆಯಲ್ಲಿ ರವೆಯನ್ನು ತುಪ್ಪದಲ್ಲಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಬೇಕು. ಅದಕ್ಕೆ ತುರಿದ ಸೋರೆಕಾಯಿಯನ್ನು ಹಾಕಿ. ಎರಡು ನಿಮಿಷ ಬಿಸಿ ಮಾಡಿ. ನಂತರ ಮಧ್ಯಮ ಗಾತ್ರದ ಉರಿಯಲ್ಲಿಯಲ್ಲಿಟ್ಟು ಅದಕ್ಕೆ ಬೆಲ್ಲ ಸೇರಿಸಿ 20 ನಿಮಿಷ ಬೇಯಿಸಿ, ಕೊಬ್ಬರಿಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಏಲಕ್ಕಿ ಪುಡಿ ಸೇರಿಸಿ, ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ತುಪ್ಪದಲ್ಲಿ ಹುರಿದಿಟ್ಟುಕೊಂಡಿದ್ದ ದ್ರಾಕ್ಷಿ, ಗೋಡಂಬಿಯನ್ನು ಸೇರಿಸಿ. ಉರಿಯನ್ನು ಆಫ್ ಮಾಡಿ. ತಣ್ಣಗಾದ ನಂತರ ಕೈಗೆ ತುಪ್ಪ ಸವರಿಕೊಂಡು ಲಡ್ಡು ಮಾಡಿ.

Related Articles

ಪ್ರತಿಕ್ರಿಯೆ ನೀಡಿ

Latest Articles