ಗಂಗೊಳ್ಳಿಯ ಅಶ್ವತ್ಥಮ್ಮನವರಿಂದ ದೇಗುಲಕ್ಕೆ ರೂ. 1ಲಕ್ಷ ದೇಣಿಗೆ

ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ದೇಗುಲಕ್ಕೆ ದಾನ ಮಾಡಿದ ತಾಯಿ

ಸಾಲಿಗ್ರಾಮ: ಅಜ್ಜಿ ಎಂದೇ ಜನಜನಿತರಾಗಿರುವ ಗಂಗೊಳ್ಳಿಯ ಅಶ್ವತ್ಥಮ್ಮನವರು ಇಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಅನ್ನದಾನ ಸೇವೆಗೆ ರೂಪಾಯಿ ಒಂದು ಲಕ್ಷವನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದರು.

ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ ಮತ್ತು ಹಸಿದವರ ಹೊಟ್ಟೆ ತುಂಬಲಿ ಎನ್ನುವ ಪ್ರಾರ್ಥನೆಯೊಂದಿಗೆ ತಾನು ಸಂಗ್ರಹಿಸಿದ ಸಂಪತ್ತಿನ ಒಂದು ಭಾಗವನ್ನು ಶ್ರೀಗುರುನರಸಿಂಹ ದೇವರ ಪಾದಕಮಲಕ್ಕೆ ಇಂದು ಸಮರ್ಪಿಸಿದರು.

ಶ್ರೀದೇವಳದ ಅರ್ಚಕರಾದ ವೇ.ಮೂ ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕರಾದ ಶ್ರೀ ಕೆ. ನಾಗರಾಜ ಹಂದೆ ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಸಾಲಿಗ್ರಾಮ ಮಯ್ಯ ಟಿಫೀನ್ ರೂಂನ ಮಾಲೀಕರಾದ ಶ್ರೀ ರಾಘವೇಂದ್ರ ಹೆಬ್ಬಾರ್ ಮತ್ತು ಮಾನಸ ಸ್ಟುಡಿಯೋ ಮಾಲೀಕರಾದ ಶ್ರೀ ರವಿಕುಮಾರ್ ಇವರು ಉಪಸ್ಥಿತರಿದ್ದರು.

ಫೆ. 9 ರಂದು ಇರುಮುಡಿ ಕಟ್ಟುವ ಕಾರ್ಯಕ್ರಮ

ಭಾರತದ ಉದ್ದಗಲಕ್ಕೂ ಇರುವ ಹಲವಾರು ಪವಿತ್ರ ಕ್ಷೇತ್ರಗಳ ಯಾತ್ರೆ ಮಾಡಿರುವ ಇವರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಶಬರಿಮಲೆಗೆ ಪ್ರಯಾಣ ಬೆಳೆಸಲಿದ್ದಾರೆ. ಆ ಪ್ರಯುಕ್ತ ಮಾಲೆ ಧರಿಸಿರುವ ಇವರು ಶ್ರೀ ಗುರುನರಸಿಂಹ ದೇವಳದ ವಠಾರದಲ್ಲಿ ಇದೇ ಫೆಬ್ರವರಿ 9ರ ಮಂಗಳವಾರ ಇರುಮುಡಿಯನ್ನು ಕಟ್ಟುತ್ತಿದ್ದು, ಸಾರ್ವಜನಿಕ ಅನ್ನದಾನ ಸೇವೆಯನ್ನು ಮಾಡುತ್ತಿದ್ದಾರೆ. ಮಧ್ಯಾಹ್ನ ನಡೆಯುವ ಅನ್ನಸಂತರ್ಪಣೆಗೆ ಸರ್ವರಿಗೂ ಆದರದ ಆಮಂತ್ರಣವನ್ನು ಕೋರುತ್ತಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles