ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮಂಗಳೂರು: ಇಲ್ಲಿನ ಶ್ರೀ ರಾಮಕೃಷ್ಣಮಠ ಬಾಲಕಾಶ್ರಮದ ವಿದ್ಯಾರ್ಥಿಗಳು ರಾಷ್ಟ್ರೀಯ ವಿಜ್ಞಾನ ದಿನವನ್ನು ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಫೆ.28ರಂದು ಆಚರಿಸಿದರು. ಕಾರ್ಯಕ್ರಮವನ್ನು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ಉದ್ಘಾಟಿಸಿದರು.

“ದುರ್ಬಲತೆಗೆ ಪರಿಹಾರವೆಂದರೆ ಅದರ ಬಗ್ಗೆ ಆಲೋಚಿಸುತ್ತಾ ಕೂಡುವುದಲ್ಲ. ಅದಕ್ಕೆ ಬದಲಾಗಿ ಶಕ್ತಿಯ ಬಗ್ಗೆ ಆಲೋಚಿಸಬೇಕು. ತಮ್ಮಲ್ಲಿ ಈಗಾಗಲೇ ಸುಪ್ತವಾಗಿರುವ ಶಕ್ತಿಯ ಬಗ್ಗೆ ಜನರಿಗೆ ತಿಳಿಸಿ ಕೊಡಿ’ ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಟ್ಟರು.

ಕಾಸ್ಸಿಯಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಸರ್ ಎವರೆಸ್ಟ್ ಕ್ರಾಸ್ತಾ ಹಾಗೂ ಬಾಲಕಾಶ್ರಮದ ವಾರ್ಡನ್ ಸ್ವಾಮೀಜಿ ರಘುರಾಮನಂದಜಿ ಉಪಸ್ಥಿತರಿದ್ದರು. ಬಾಲಕಾಶ್ರಮ ವಿದ್ಯಾರ್ಥಿಗಳ ವಿವಿಧ ವಿಜ್ಞಾನ ಮಾದರಿ ಪ್ರದರ್ಶನ ಪ್ರೇಕ್ಷಕರ ಮನಸ್ಸನ್ನು ಸೆಳೆಯಿತು.

Related Articles

ಪ್ರತಿಕ್ರಿಯೆ ನೀಡಿ

Latest Articles