ಶ್ರೀ ರಾಯರ ಮಠದಲ್ಲಿ ಮನಸೆಳೆದ ಭಕ್ತಿ ಗಾಯನ

ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರವಾಗಿ ಮಠದ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 15 ರಂದು ಬೆಳಗಿನ ಪೂಜಾ ಕಾರ್ಯಕ್ರಮಗಳಲ್ಲಿ ಶ್ರೀ ಗುರುರಾಯರ ಬೃಂದಾವನಕ್ಕೆ ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆಯಿತು.

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿರಂಜಿತಾ ಪ್ರಸಾದ್ ಮತ್ತುಭಾವನಾ ಮೂರ್ತಿ ಅವರಿಂದ ಹರಿದಾಸವಾಣಿ ಗಾಯನ ಜರುಗಿತು. ಈ ಕಾರ್ಯಕ್ರಮದಲ್ಲಿ ಗಾಯನ ಕಲಾವಿದರು ‘ವಂದಿಸುವುದಾದಿಯಲಿ ಗಣನಾಥನ’ ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ ನಂತರ ‘ತೇರಾನೇರಿ ಮೆರೆದು ಬರುವ ಭೂಸುರವಂದ್ಯ ಯಾರಕ್ಕ’, ‘ಎದ್ದುಬರುತಾರೆ ನೋಡೆ ಮುದ್ದು ಬೃಂದಾವನದೊಳಗಿಂದ’, ಕುಣಿಯುತ ನಲಿಯುತ ಬಾ ಶಂಕರ, ಪಾಲಯಮಾಂ ಪವಮಾನ, ವಂದಿಪೆನಮ್ಮ ಮುದ್ದು ಶಾರದೆ, ಆರಿಗೆ ವಧುವಾದೆ ಅಂಬುಜಾಕ್ಷಿ, ಬಾ ಬಾ ಭಕುತರ ಹೃದಯ ಮಂದಿರ, ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೇ ಸಾಕು, ಅಭಯಗಿರಿವಾಸ ಶ್ರೀ ಶ್ರೀನಿವಾಸನು… ಹೀಗೆ ಇನ್ನೂ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ವಾದ್ಯ ಸಹಕಾರದಲ್ಲಿ, ಕೀ-ಬೋಡ್೯ನಲ್ಲಿ ಅಮಿತ್ ಶರ್ಮಾ, ತಬಲಾದಲ್ಲಿ ಸರ್ವೋತ್ತಮ ಸಾಥ್ ನೀಡಿದರು.

ವರದಿ: ದೇಸಾಯಿ ಸುಧೀಂದ್ರ

Related Articles

ಪ್ರತಿಕ್ರಿಯೆ ನೀಡಿ

Latest Articles