ಶಿಷ್ಟರ ರಕ್ಷಣೆಗೆ ಅವತಾರವೆತ್ತಿದ ಶ್ರೀ ನರಸಿಂಹ ದೇವರು

ವೈಶಾಖ ಮಾಸದ ಶುದ್ಧ ಚತುರ್ದಶಿಯಂದು ಬರುವ ಪ್ರಮುಖ ದಿನ ನರಸಿಂಹ ಜಯಂತಿ. ಶ್ರೀ ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಶ್ರೀ ನರಸಿಂಹ ಅವತಾರವು ನಾಲ್ಕನೆಯದು.

*ಚಂದ್ರಿಕಾ ಗಿರೀಶ್

ನರಸಿಂಹೋಖಿಲ ಜ್ಞಾನ ಮತಧ್ವಾನ್ತ ದಿವಾಕರಃ ಜಯತ್ಯಮಿತ ಸುಜ್ಞಾನ ಸುಖಶಕ್ತಿ ಪಯೋನಿಧಿಹಿ.

ಭಗವಾನ್ ಶ್ರೀ ವಿಷ್ಣು ತನ್ನ ಪರಮ ಭಕ್ತನಾದ ತರಳ ಪ್ರಹ್ಲಾದನನ್ನು ರಕ್ಷಿಸಲು ಹಾಗು ಅವನ ಅಸುರ ತಂದೆಯಾದ ದುಷ್ಟ ಹಿರಣ್ಯಕಶಿಪುವನ್ನು ಸಂಹರಿಸಲು ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾದ ಭಗವಂತನು ತಾಳಿದ ಅವತಾರವಿದು. ಯಾವುದೇ ಮಾನವ ಮಾತ್ರನಾದವನಿಂದ, ದೇವತೆ ಅಥವಾ ಪ್ರಾಣಿಗಳಿಂದ ಆಗಲಿ, ಯಾವುದೇ ಅಸ್ತ್ರಗಳಿಂದ ಆಗಲಿ, ಹಗಲು ಅಥವಾ ರಾತ್ರಿಯಲ್ಲಿ ಆಗಲಿ, ಒಳಗಾಗಲಿ, ಹೊರಗಾಗಲಿ ಯಾವುದರಿಂದಲೂ ತನಗೆ ಸಾವು ಉಂಟಾಗಬಾರದೆಂದು ಎಂದು ಬ್ರಹ್ಮನಿಂದ ವಿಶೇಷ ವರವನ್ನು ಪಡೆದಿದ್ದ ಹಿರಣ್ಯಕಶಿಪುವನ್ನು ಅರ್ಧ ಮನುಷ್ಯ ರೂಪ , ಅರ್ಧ ಸಿಂಹ ರೂಪದಿಂದ ತನ್ನ ತೊಡೆಯ ಮೇಲೆ, ಹೊಸ್ತಿಲಲ್ಲಿ ತನ್ನ ತೀಕ್ಷ್ಣ ಉಗುರುಗಳಿಂದ ಮುಸ್ಸಂಜೆಯ ಹೊತ್ತಿನಲ್ಲಿ ಸಂಹರಿಸಿದ ಅವತಾರವಿದು ಎಂದು ಪುರಾಣಗಳು ಹೇಳುತ್ತವೆ.

ಹಿರಣ್ಯಕಶಿಪು ಅಸಾಮಾನ್ಯ ವ್ಯಕ್ತಿ. ಭಗವಂತನ ದ್ವಾರಪಾಲಕನಾಗಿ ವೈಕುಂಠವಾಸಿಯಾಗಿಯೇ ಆಗಿದ್ದವನು. ಶಾಪಗ್ರಸ್ತನಾಗಿ ಭೂಮಿಯಲ್ಲಿ ಅಸುರನಾಗಿ ಹುಟ್ಟಿ ಮೂರು ಲೋಕಗಳನ್ನು ಗೆದ್ದ ಮಹಾವೀರ. ತಾನೇ ದೇವರು ಎಂದು ಸ್ವಯಂ ಘೋಷಿಸಿಕೊಂಡ ಅಸುರ. ಮಹಾ ವಿಷ್ಣುವಿನ ಭಕ್ತನಾದ ಅವನ ಮಗ ಪ್ರಹ್ಲಾದನನ್ನು “ನಿನ್ನ ದೇವರು ಎಲ್ಲ ಕಡೆ ಇದ್ದಾನೋ” ಎಂಬ ಕೇಳಿದ ಪ್ರಶ್ನೆಗೆ ನಿರ್ಭಯನಾಗಿ ಪ್ರಹ್ಲಾದನು ಕೊಟ್ಟ ಉತ್ತರ “ಭಗವಂತ ಸರ್ವ್ಯವ್ಯಾಪಿ “.

ಕೊನೆಗೆ ಅರಮನೆಯ ಕಂಬದಲ್ಲಿ ಇದ್ದಾನೆಯೇ ಎಂಬ ಆ ದುರಾಗ್ರಹಿಯ ಪ್ರಶ್ನೆಗೆ ಉತ್ತರವಾಗಿ ಕಂಬವನ್ನು ಒಡೆದುಕೊಂಡು ನರಸಿಂಹ ರೂಪದಿಂದ ಪ್ರಕಟನಾಗಿ ಹಿರಣ್ಯಕಶಿಪುವನ್ನು ಸಂಹರಿಸುತ್ತಾನೆ. ಸಿಂಹವು ಪರಾಕ್ರಮದ, ಗಂಭೀರತೆಯ ಸಂಕೇತ.

ಹಿರಣ್ಯಕಶಿಪು ಎಷ್ಟೇ ಬುದ್ಧಿವಂತಿಕೆಯಿಂದ ವರವನ್ನು ಪಡೆದರೂ ಕೂಡ ದುಷ್ಟಬುದ್ಧಿಯಿಂದ ಕೂಡಿದ ಅವನನ್ನು ಪ್ರಹ್ಲಾದ ರೂಪಿಯಾದ ಭಕ್ತನ ಮೂಲಕ ಪರಮಾತ್ಮನು ಸಂಹರಿಸಿ ದುಷ್ಟ ಶಿಕ್ಷಣವನ್ನು ಮಾಡಿದ ನರಸಿಂಹನ ಉಪಾಸನೆ ಬಹಳ ಮಹತ್ವವುಳ್ಳ ಪರ್ವ ದಿನ.

ಶ್ರೀ ನರಸಿಂಹ ದೇವರ ಪೂಜೆ ಪ್ರದೋಷ ಕಾಲದಲ್ಲಿ ಮಾಡುವುದು ಸಕಲ ಪಾಪಗಳನ್ನು ನಿವಾರಣೆ ಮಾಡುವಂಥದ್ದಾಗಿದೆ. ನರಸಿಂಹ ದೇವರ ಪೂಜೆ, ಆರಾಧನೆಯಿಂದ ಸಕಲ ಅಸುರೀ ಶಕ್ತಿಗಳು ಶೀಘ್ರದಲ್ಲಿ ನಾಶವಾಗಿ ಅನುಗ್ರಹಿಸುವುದರಲ್ಲಿ ಯಾವ ಶಂಕೆಯೂ ಇಲ್ಲ.

ಚತುರ್ದಶ ಲೋಕಗಳಲ್ಲಿ ಭಗವಂತ ವ್ಯಾಪಿಯಾಗಿದ್ದಾನೆ ಎಂಬುದನ್ನು ಶ್ರೀ ನರಸಿಂಹ ಅವತಾರ ತಿಳಿಸಿದೆ. 14 ರ ಸಂಖ್ಯೆ ಪ್ರಮುಖವಾದದ್ದು ನೋಡಿ. ನರಸಿಂಹ ದೇವರ ಉಪಾಸನೆಯಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ,ಈರ್ಷ್ಯೆ, ಅಸೂಯೆ, ಡಂಭ, ದರ್ಪ, ಅಹಂಕಾರ, ಇಚ್ಛೆ,ಶ್ರ ದ್ಧೆ ಮತ್ತೆ ಭಕ್ತಿ ಎನ್ನುವ 14 ಮನೋವೃತ್ತಿಗಳು ಬಳಕೆಯಾಗಿವೆ.

ಮೊದಲ ಹನ್ನೊಂದು ಹಿರಣ್ಯಕಶಿಪು ದೇವರೆದುರು ಪ್ರದರ್ಶಿಸಿದುದು. ಕೊನೆಯ ಮೂರು ಪ್ರಹ್ಲಾದನು ವಿಷ್ಣುವಿಗೆ ಅರ್ಪಿಸಿದುದು. ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ಯಾರು ಭಗವಂತನಲ್ಲಿ ಶರಣಾಗತರಾಗಿ ಮೊರೆ ಹೋಗುತ್ತಾರೋ ಅವರನ್ನು ಭಗವಂತನು ಪೊರೆಯುತ್ತಾನೆ ಎಂಬುದಕ್ಕೆ ನಮ್ಮ ನರಸಿಂಹ ದೇವರ ಅವತಾರವೇ ಸಾಕ್ಷಿಭೂತವಾಗಿದೆ.

ಮನೆಯಿಂದ ಹೊರಗೆ ಹೊರಟಾಗ ನಮ್ಮ ಸಕಲ ವಿಘ್ನಗಳ ಪರಿಹಾರಕ್ಕಾಗಿ ನರಸಿಂಹ ದೇವರನ್ನು ನೆನೆದರೆ ಯಾವ ರೀತಿಯ ಅಡ್ಡಿ ಆತಂಕಗಳು ಎದುರಾಗದು. ಕ

ೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತವನ್ನು ಆಚರಿಸುವ ಪದ್ಧತಿ ಉಂಟು. ಮಂಟಪ ನಿರ್ಮಿಸಿ, ಕಲಶ ಸ್ಥಾಪಿಸಿ ನರಸಿಂಹ ದೇವರ ಪ್ರತಿಮೆ ಇಟ್ಟು ಪೂಜೆ ಮಾಡುತ್ತಾರೆ. ನೈವೇದ್ಯಕ್ಕಾಗಿ ಪಾನಕ, ಕೋಸಂಬರಿ ಮಾಡುತ್ತಾರೆ. ನರಸಿಂಹ ದೇವರ ಪೂಜೆಯಿಂದ ನಾವು ಪುಣ್ಯಗಳಿಗೆ ಭಾಜನರಾಗುತ್ತೇವೆ. ನಾರಸಿಂಹನೇ ನಮಿಪೆ ಕರುಣಿಪುದೆಮಗೆ ಮಂಗಲವ …

Related Articles

ಪ್ರತಿಕ್ರಿಯೆ ನೀಡಿ

Latest Articles