ಜನುಮ ದಿನ

*ಜ್ಯೋತಿ.ಸಿ.ಕೋಟಗಿ

ತಾಯ ಒಡಲಿಂದ ಮಡಿಲಪ್ಪುಗೆ ಸೇರಿದ ದಿನ
ಪ್ರಥಮ ಅಪ್ಪುಗೆ,ಚುಂಬನ ಪಡೆದ ದಿನ
ಮುದ್ದು ಕಂದನ ಕಂಬನಿ ಸುರಿದ ಮೊದಲ ದಿನ
ನವ ಮಾಸದ ನಿದ್ರೆಗೆ ಕೊನೆ ಹಾಡಿದ ದಿನ//
ಜನ್ಮ ನೀಡಿದ ಅಮ್ಮ ಮರು ಜನ್ಮ ಪಡೆದ ದಿನ
ಕಂದ ಕೈ ಸೇರಿದಾಗ ಸ್ವರ್ಗದಾನಂದ ಸಿಕ್ಕ ದಿನ
ಕೋಮಲ ವದನ ಕಂಡಾಗ ಸಂಕಷ್ಟ ಮರೆತ ದಿನ
ಸರಿಸಾಟಿಗೆ ಸಿಗದ ಸುಂದರ ಕ್ಷಣಗಳ ದಿನ//
ಮನೆಯ ತುಂಬಾ ಕಂದನದೆ ಕಾರುಬಾರು
ತಾಯಿ ಮಗುವಿನ ಜೋಪನ ಬಲು ಜೋರು
ಮನೆಮಂದಿಯ ಸಡಗರ ತಡಿರ‍್ಯಾರು
ಬೀದಿ ತುಂಬೆಲ್ಲ ಸಿಹಿ ಹಂಚಿಕೆ ಜೋರು//
ಕಂದನ ಗುರುತಿಗೆ ಕರೆದದ್ದೆ ಹೆಸರು
ಮಮತೆಯಲಿ ಕರೆವರು ನೂರೆಂಟು ಹೆಸರು
ಹೆಸರಿಡುವ ಸಡಗರದಿ ಮನೆ ತುಂಬ ಜನರು
ಶಾಸ್ತç ಪುರೋಹಿತರನೊಮ್ಮೆ ಕೇಳಿಯೇ ಬಿಡುವರು//
ಬರೀಗೈಲಿ ಕಂದನ ಎಂದೂ ನೋಡರು
ಇದ್ದಷ್ಟೇ ಕಾಣಿಕೆ ಕೊಟ್ಟೇ ಬಿಡುವರು
ಆಚಾರ ವಿಚಾರಗಳನ್ನು ಎಂದೂ ಮರೆಯರು
ಸಂಸ್ಕಾರದ ಸಂಕೇತ ನಮ್ಮ ಹಿರಿಯರು//
ತಾಯ ಋಣ ತೀರಿಸಲು ಸಾಧ್ಯವೇ?
ತಾಯ ಪ್ರೇಮಕ್ಕೆ ಅಳತೆಗೋಲುಂಟೆ?
ತಾಯಿಗಾಗಿ ಮಿಡಿ ಮನವೇ,
ತಾಯ್ನಾಡಿಗಾಗಿ ಮಡಿ ಮನವೇ.//


Related Articles

ಪ್ರತಿಕ್ರಿಯೆ ನೀಡಿ

Latest Articles