ಶಾಂತಿಯ ಬದುಕಿಗೆ ಅಧ್ಯಾತ್ಮದ ಅರಿವು ಮುಖ್ಯ : ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು): ಆಗಸ್ಟ್
ಮನುಷ್ಯ ಸಂಬ0ಧಗಳು ಸಡಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಸಂಸ್ಕಾರ ಸದ್ವಿಚಾರಗಳ ಮೂಲಕ ಬೆಸೆಯುವ ಅವಶ್ಯಕತೆಯಿದೆ. ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಅಧ್ಯಾತ್ಮ ಜ್ಞಾನದ ಅರಿವು ಮುಖ್ಯವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶ್ರೀ ರಂಭಾಪುರಿ ಪೀಠದಲ್ಲಿ ಕೈಗೊಂಡ 30 ನೇ ವರ್ಷದ ಇಷ್ಟಲಿಂಗ ಪೂಜಾ ತಪೋನುಷ್ಠಾನ ಹಾಗೂ ಪುರಾಣ ಪ್ರವಚನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.


ಭಕ್ತನ ಹೃದಯ ಭಗವಂತ ನೆಲೆಸಿರುವ ದೇಗುಲ. ಜೀವಾತ್ಮ ಪರಮಾತ್ಮನ ಕಿರಣ. ಮುಳ್ಳಿನ ನಡುವೆ ಗುಲಾಬಿ ಅರಳಿ ಪರಿಮಳ ಬೀರುವಂತೆ ಕಷ್ಟಗಳ ನಡುವೆ ಬಾಳಿ ಬದುಕಿದರೂ ಮೂಲ ಆದರ್ಶಗಳನ್ನು ಮರೆಯಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸತ್ಕಾçಂತಿ ಜನ ಮನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ. ಕರ್ಮ ಕಳೆದು ಧರ್ಮ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಅಂಥ ಮಹಿಮಾನ್ವಿತರ ಸತ್ಕಥಾ ಶ್ರವಣವನ್ನು ಪವಿತ್ರ ಶ್ರಾವಣ ಮಾಸದಲ್ಲಿ ಶ್ರವಣ ಮಾಡುವ ಸೌಭಾಗ್ಯ ಬಂದಿದೆ ಎಂದರು.


ಬಬಲಾದ ಹಿರೇಮಠದ ದಾನಯ್ಯ ದೇವರು ‘ಶ್ರೀ ಜಗದ್ಗುರು ರೇಣುಕ ಚಾರಿತ್ರö್ಯ’ ಪ್ರಾರಂಭಿಸಿ ಶಿವಶಕ್ತಿ-ಪೂರ್ವ ಕವಿಗಳ ನೆನಹುಗಳನ್ನು ಹಂಚಿಕೊ0ಡರು. ಉಟಗಿ ಹಿರೇಮಠದ ಶಿವಪ್ರಸಾದ ದೇವರು ಪ್ರಾಸ್ತಾವಿಕ ನುಡಿ ಸಲ್ಲಿಸಿದರು. ರೇವತಗಾವ್ ವಿಶ್ವನಾಥ ದೇವರು ಮತ್ತು ಘನಲಿಂಗ ದೇವರು ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಇವರಿಂದ ಭಕ್ತಿ ಗೀತೆ ಜರುಗಿತು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.

ಬೆಳಗ್ಗೆ ಕ್ಷೇತ್ರದ ಎಲ್ಲ ದೈವಗಳಿಗೆ ಪೂಜೆ ಸಲ್ಲಿಸಿ ಶ್ರಾವಣ ನಿಮಿತ್ಯ ವಿಶೇಷ ಪೂಜೆ ಜರುಗಿತು. ಅರಸೀಕೆರೆಯ ಕೆ.ವಿ. ನಿರ್ವಾಣಸ್ವಾಮಿ ಕುಟುಂಬದವರು ಮತ್ತು ಹೂವಿನಹಳ್ಳಿ ಹೆಚ್.ಆರ್.ಅಶೋಕ ಕುಟುಂಬದವರು ದಾಸೋಹ ಸೇವೆ ಸಲ್ಲಿಸಿದರು.


ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles