ಇಸ್ಕಾನ್ ಬೆಂಗಳೂರಿನಲ್ಲಿ ಶ್ರೀ ರಾಧಾಷ್ಟಮಿ ಸಂಭ್ರಮ

ಸೆಪ್ಟೆಂಬರ್ 14, ಭಾದ್ರಪದ ಮಾಸದ ಶುಕ್ಲ ಪಕ್ಷದ ಅಷ್ಟಮಿಯಈ ದಿನದಂದು ದೇವಿ ರಾಧಾರಾಣಿಯ ಆವಿರ್ಭಾವದ ದಿನ.  ರಾಧಾಷ್ಟಮಿಯು ಶ್ರೀ ಕೃಷ್ಣನ ಭಕ್ತರಿಗೆ ಒಂದು ಪ್ರಮುಖವಾದ ಉತ್ಸವ.

ಇಸ್ಕಾನ್ ಬೆಂಗಳೂರಿನ ಮುಖ್ಯ ಪೂಜಾ ಮೂರ್ತಿಗಳಾದ ಶ್ರೀ ರಾಧಾ ಕೃಷ್ಣಚಂದ್ರರಿಗೆ ಹೊಸ ವಸ್ತ್ರಗಳಿಂದ ಮತ್ತು ಬಣ್ಣ ಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ದೇಶದ ಕ್ಷೇಮ ಮತ್ತು ಶಾಂತಿಗಾಗಿ ಇಂದಿನ ಬೆಳಗ್ಗೆ ರಾಧಾ ಸಹಸ್ರನಾಮ ಹೋಮವನ್ನು ನೆರವೇರಿಸಲಾಯಿತು.

ಶ್ರೀ ರಾಧಾ ಕೃಷ್ಣಚಂದ್ರ ಉತ್ಸವ ಮೂರ್ತಿಗಳಿಗೆ ಸಂಜೆ ವೈಭವದ ಅಭಿಷೇಕ (ಪಂಚಗವ್ಯ, ಪಂಚಾಮೃತ, ಔಷಧಿಗಳ ಸ್ನಾನ, ಪುಷ್ಪೋಧಕ ಮತ್ತು 108 ಕಳಶಗಳ ಜಲದಿಂದ) ನಡೆಯಿತು. ಭವ್ಯವಾದ ಮಹಾ ಮಂಗಳಾರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಕಾರ್ಯಕ್ರಮವು ಸಮಾಪ್ತಗೊಂಡಿತು.

Related Articles

ಪ್ರತಿಕ್ರಿಯೆ ನೀಡಿ

Latest Articles