ಭಕುತಿಗೊಲಿವ ಶ್ರೀ ಗೋವರ್ಧನ

ಭಗವಂತ ನಾಮ ಭಜನೆ ಜಗದಗಲ ಹರಡುವಾ
 ಯತಿಶ್ರೇಷ್ಠರಾ ಅನುಯಾಯಿಯಾಗಿ 
ನಾವೆಲ್ಲ ನಡೆಯುವಾ...ಸುಗುಣೇಂದ್ರ ತೀರ್ಥರ ಅನುಯಾಯಿಯಾಗಿ 
ನಾವೆಲ್ಲ ನಡೆಯುವಾ ||ಪ||

ಬಂಗಾರದ ಕಾಂತಿಯುತ ನಮ್ಮ ಶ್ರೀ ಕೃಷ್ಣನೂ
ಸಿಂಗಾರದ ಭಕುತಿಗೊಲಿವ ಶ್ರೀ ಗೋವರ್ಧನನೂ (2)

ಮುಕ್ಕೋಟಿ ಸುರರಿಂದ ಆರಾಧಿತ ಈ ಜಗದೊಡೆಯನೂ …ಕೃಷ್ಣಾ..(3)
ಅಣು ಅಣುವಲೂ ಗೋಚರಿಸುವ ಮೇರು ಸದೃಶನೂ    ||ಪ||

ಈ ಮಾನುಷ ಬದುಕಿಗೆ ದೈವೀಕತೆಯೇ ಮುಕುಟ
ಅನುಕ್ಷಣವೂ ಅವನ ಮರೆಯೆ ಅಮಾನುಷವದೂ ದಿಟ! (2)

ಹೆಣ್ಣು-ಹೊನ್ನು-ಮಣ್ಣಲ್ಯಾವ ಮುಕುತಿಯಡಗಿದೆ…ಕೃಷ್ಣಾ….(3)
ನಾನು-ನನದೆಂಬ  ಅಹಂಕಾರ ಅಳಿಯದೇ..              ||ಪ||

ಸ್ವಾರ್ಥ ತೊರೆದು ವಿರಕ್ತಿ ಪಡೆದು
ನಮ್ಮ ನಾವು ಅರಿಯಲು..

ವೇಂಕಟ-ವಿಠ‍್ಠಲಾ…(3).. ಸುಗುಣದಾಸ
ವೇಂಕಟ-ವಿಠ್ಠಲನ ಅನುಗ್ರಹ ದೊರೆಯುವುದು ಖಚಿತ.

ರಚನೆ: ಡಾ. ಸುದರ್ಶನ್ ಭಾರತೀಯ 
ಡಾ. ಸುದರ್ಶನ್ ಭಾರತೀಯ

ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ವರ್ಧಂತಿ ಪ್ರಯುಕ್ತ
ವೇಂಕಟ-ವಿಠ‍್ಠಲ ಸುಗುಣದಾಸ ವಿರಚಿತ, ( ಉಡುಪಿ-ಬೆಂಗಳೂರು
)

Related Articles

ಪ್ರತಿಕ್ರಿಯೆ ನೀಡಿ

Latest Articles