ವಣಿ ಎಂಬ ಬೆಟ್ಟದ ಮೇಲೆ ನೆಲೆಸಿಹ ಸಪ್ತಶೃಂಗ ದೇವಿ

*ಲೀಲಾ ಚಂದ್ರಶೇಖರ ಹೆಚ್.ಬಿ. ಬೆಂಗಳೂರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಉತ್ತರದ ಕಡೆ ಅರವತ್ತು ಕಿಲೋ ಮೀಟರ್ ಅಂತರದಲ್ಲಿ ಇರುವ ವಣಿ ಎಂಬ ಸಣ್ಣ ಹಳ್ಳಿಯ ಬೆಟ್ಟದ ಮಧ್ಯದಲ್ಲಿ ಎಂಟು ಅಡಿ ಎತ್ತರದ ಸ್ವಯಂಭೂ ಮೂರ್ತಿಯಾಗಿ ನೆಲೆಸಿರುವ ಸಪ್ತಶೃಂಗ ದೇವಿಯನ್ನು ದೇಶದ ಬೇರೆಲ್ಲೂ ನೋಡಲು ಸಿಗುವುದಿಲ್ಲ.

ಬೆಟ್ಟದ ಸುತ್ತಲೂ ಪ್ರಕೃತಿ ನಯನಮನೋಹರವಾಗಿದೆ. ಮೂರೂವರೆ ಶಕ್ತಿ ಪೀಠಗಳಲ್ಲಿ ವಣಿ ದೇವಿಯು ಅರ್ಧ ಶಕ್ತಿಪೀಠದಲ್ಲಿದ್ದರೂ ಬಹಳ ಪ್ರಭಾವಶಾಲಿ, ಮಹಿಮಾಶಾಲಿಯಾಗಿ ಪ್ರಚಲಿತವಾಗಿದೆ. ಈ ದೇವಿಗೆ ಹದಿನೆಂಟು ಕರಗಳಿದ್ದು ಎಲ್ಲದರಲ್ಲೂ ವಿವಿಧ ಶಸ್ತ್ರಗಳನ್ನು ಹಿಡಿದಿದ್ದಾಳೆ.

(ಚಿತ್ರದಲ್ಲಿ ತೋರಿಸಿರುವುದನ್ನು ಗಮನಿಸಿ) ಮೇಲಿನಿಂದ ಕೆಳಗಿನವರೆಗೂ ದೇವಿಯು
ಆಭರಣಭೂಷಿತೆಯಾಗಿದ್ದಾಳೆ. ನವರಾತ್ರಿಯಲ್ಲಿ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ.

ಮಹಿಷಾಸುರನ ವಿನಾಶ ಮಾಡಿದ ನಂತರ ಈ ದೇವಿಯು ಬೆಟ್ಟದ ಮೇಲೆ ಸಯಂಭೂ ನೆಲಸಿದ್ದಾಳೆ. ಈ ದೇವಿಯ ಕಥೆ ಮೈಸೂರಿನ ಚಾಮುಂಡೇಶ್ವರಿ ಕಥೆಗೆ ಹೋಲುತ್ತದೆ. ಬೆಟ್ಟದ ಮೇಲೆ ಹೋಗಲು ಡೋಲಿ, ಕಾಲ್ನಡಿಗೆಯ ರಸ್ತೆ, 500 ಮೆಟ್ಟಿಲುಗಳ ರಸ್ತೆ ಮತ್ತು ಮಿನಿ ಬಸ್ ಗಳ ಅನುಕೂಲವಿದೆ. ಈ ದೇವಿಯ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles