ಶಬರಿಮಲೆಯಲ್ಲಿ ಭಕ್ತರ ಪ್ರವೇಶ ಹೆಚ್ಚಳಕ್ಕೆ ತೀರ್ಮಾನ

ಕಾಸರಗೋಡು: ಶಬರಿಮಲೆಯಲ್ಲಿ ಈ ಬಾರಿ ಮಂಡಲ, ಮಕರ ಜ್ಯೋತಿ ಉತ್ಸವಕ್ಕೆ ಭಕ್ತರಿಗೆ ನಿಯಂತ್ರಣದೊ0ದಿಗೆ ಪ್ರವೇಶ ಕಲ್ಪಿಸಲು ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ತೀರ್ಮಾನಿಸಿದೆ. ಈ ಹಿಂದೆ ಪ್ರತಿದಿನ 25 ಸಾವಿರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್ ಕಡಿಮೆಯಾದ್ದಲ್ಲಿ ಈ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಸರಕಾರ ಏರ್ಪಡಿಸಿರುವ ವರ್ಚ್ಯುವಲ್ ಕ್ಯೂ ಮೂಲಕ ಅವಕಾಶ ಲಭಿಸದವರಿಗೆ ನೀಲಕ್ಕಲ್‌ನಲ್ಲಿ ಸ್ಪಾಟ್ ಬುಕ್ಕಿಂಗ್ ಮೂಲಕ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಶಬರಿಮಲೆಗೆ ವರ್ಚ್ಯುವಲ್ ಕ್ಯೂ ಬುಕ್ಕಿಂಗ್ ಆರಂಭಗೊ0ಡಿದೆ. ಎರಡು ಡೋಸ್ ವ್ಯಾಕ್ಸಿನ್ ಪಡೆದವರು ಅಥವಾ 72 ತಾಸುಗಳ ಒಳಗೆ ಆರ್‌ಟಿಪಿಸಿಆರ್ ಸರ್ಟಿಫಿಕೇಟ್ ಹೊಂದಿದವರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ರಾತ್ರಿ ವೇಳೆ ಭಕ್ತರಿಗೆ ಸನ್ನಿಧಾನದಲ್ಲಿ ತಂಗಲು ಅವಕಾಶ ನಿರಾಕರಿಸಲಾಗಿದೆ. ಪಂಪಾ ನದಿಯಲ್ಲಿ ಭಕ್ತರ ಸ್ನಾನಕ್ಕೆ ನಿರ್ಬಂಧ ಹೇರಲಾಗಿಲ್ಲ ಎಂದು ದೇವಸ್ವಂ ಮಂಡಳಿ ಸ್ಪಷ್ಟಪಡಿಸಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles