ಕೋಟಿ ಗೀತಾಲೇಖನ ಯಜ್ಞ : ಪುತ್ತಿಗೆ ಶ್ರೀಗಳ ಸಂಕಲ್ಪ

2024ರಲ್ಲಿ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯ| ಈ ನಿಮಿತ್ತ ಶ್ರೀಗಳಿಂದ ಪಂಚ ಯೋಜನೆಗಳು

ಬೆಂಗಳೂರು: ಉಡುಪಿ ಶ್ರೀಕೃಷ್ಣ ಮಠದ ಭಾವೀ ಪರ್ಯಾಯ ಶ್ರೀಗಳಾದ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಪರ್ಯಾಯ ನಿಮಿತ್ತ ವಿಶೇಷ ಸಂಕಲ್ಪ ಮಾಡಿದ್ದಾರೆ. ಅದುವೇ ಕೋಟಿ ಗೀತ ಲೇಖನ ಯಜ್ಞ. ಕನಿಷ್ಟ ಒಂದು ಕೋಟಿ ಜನರಿಂದ ಶ್ರೀಮದ್‌ಭಗವದ್ಗೀತೆಯನ್ನು ಬರೆಸುವ ಸಂಕಲ್ಪ ಅವರದ್ದು.

ಚತುರ್ಥ ಪರ್ಯಾಯದ ಎರಡು ವರ್ಷಗಳಲ್ಲಿ ಪ್ರತಿನಿತ್ಯ ಗೀತಾಚಾರ್ಯನ ಸನ್ನಿಧಾನವುಳ್ಳ ಗೀತಾಮಂದಿರದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಅಖಂಡ ಭಗವದ್ಗೀತಾ ಪಾರಾಯಣದೊಂದಿಗೆ ಪರ್ಯಾಯದ ಕೊನೆಗೆ ಅಂತಾರಾಷ್ಟಿçÃಯ ಶ್ರೀಮದ್ಭಾಗವತಾ ಮಹಾಯಾಗವನ್ನು ಅರ್ಪಿಸುವುದು ಪರ್ಯಾಯ ನಿಮಿತ್ತ ಕೈಗೊಂಡ ಸಂಕಲ್ಪದಲ್ಲಿ ಎರಡನೆಯದು.

ಗೀತೆಗಿಂತಲೂ ಶ್ರೇಷ್ಠ ಗ್ರಂಥ ಬೇರೆ ಯಾವುದೂ ಇರುವುದಕ್ಕೆ ಸಾಧ್ಯ ಇಲ್ಲ. ಇತರ ಯಾವ ಜೀವಿಗಳಿಗೂ ಸಿಗದ ಅಧ್ಯಾತ್ಮ ಜ್ಞಾನವೆಂಬ ಉತ್ಕೃಷ್ಟ ಉಡುಗೊರೆ ಮನುಷ್ಯನಿಗೆ ಸಿಕ್ಕಿದೆ. ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ ಎಂಬAತೆ ಜ್ಞಾನಕ್ಕಿಂತಲೂ ಪವಿತ್ರವಾದುದು ಯಾವುದೂ ಇಲ್ಲ ಎಂಬುದು ಗೀತೆಯ ವಾಕ್ಯ. ಇದು ಪರಮಾತ್ಮನಿಗೆ ಸಂಬAಧಿಸಿದ ಅಧ್ಯಾತ್ಮ ಜ್ಞಾನದ ಮಹತ್ವವನ್ನು ಸಾರುತ್ತದೆ. ಇಂತಹ ಶ್ರೇಷ್ಠವಾದ ಅರಿವನ್ನು ಹೊಂದಿ ನಮ್ಮನ್ನು ನಾವೇ ಉದ್ಧರಿಸಿಕೊಳ್ಳವುದಕ್ಕೆ ಸಾಧ್ಯವಿದೆ.

ಭಗವದ್ ಚಿಂತನೆಯ ಪುಣ್ಯ ಕೈಂಕರ್ಯ. ಮನುಷ್ಯನ ಉದ್ಧಾರಕ್ಕಾಗಿ ನಾಲ್ಕು ವೇದಗಳ ಸಾರರೂಪವಾಗಿ ಶ್ರೀಕೃಷ್ಣ ಪರಮಾತ್ಮ ಉದ್ಘರಿಸಿದ ಗೀತೆಯನ್ನು ಸ್ವಹಸ್ತದಿಂದ ಬರೆಯುವ ಒಂದು ಅವಕಾಶ. ಕೊನೆಗೆ ಶ್ರೀಮದ್ಭಗದ್ಗೀತಾ ಮಹಾಯಾಗದೊಂದಿಗೆ ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಬಹುದು. ನಂತರ ಸ್ವತಃ ತಾವೇ ಬರೆದ ಪುಸ್ತಕವನ್ನು ಮನೆಯ ದೇವರ ಕೋಣೆಯಲ್ಲಿ ಪ್ರತಿಷ್ಠಾಪಿಸಿ ಮುಂದೆ ಅದು ನಮ್ಮ ಪೀಳಿಗೆ ನಿರಂತರವಾಗಿ ಪೂಜಿಸುವಂತೆ ಮಾಡಬಹುದು.
ಜಾತಿ ಮತ, ಲಿಂಗ, ವಯಸ್ಸಿನ ಬೇಧವಿಲ್ಲದೇ ಎಲ್ಲರೂ ಈ ಸಂಕಲ್ಪದಲ್ಲಿ ಭಾಗಿಯಾಗಬಹುದು.

ಕೋಟಿಗೀತಲೇಖನ ಯಜ್ಞದ ಸಂಕಲ್ಪ ಪತ್ರವನ್ನು ಪಡೆಯಲು https://www.shriputhige.org/ವೆಬ್‌ಸೈಟ್‌ನಿಂದ ಪಡೆದುಕೊಳ್ಳಬಹುದು. ಅದರಲ್ಲಿ ಗೀತಾಲೇಖನ ಯಜ್ಞಕ್ಕೆ ಸಂಬ0ಧಿಸಿದ0ತೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.

ಭಗವದ್ಗೀತೆಯ ಸಂಪೂರ್ಣ ಶ್ಲೋಕಗಳನ್ನು 18 ಜನವರಿ 2024ರ ಒಳಗೆ ಬರೆದು ಪೂರ್ಣಗೊಳಿಸಿದಲ್ಲಿ ಎರಡನೇ ಬಾರಿ ಬರೆಯುವುದಕ್ಕೆ ಆರಂಭಿಸಬಹುದು. ಗೀತೆಯನ್ನು ಬರೆದು ಮುಗಿಸಿದ ಮೇಲೆ 18 ಜನವರಿ 2024ರಿಂದ 17ಜನವರಿ 2026ರ ಒಳಗೆ ಬಂದು ಸ್ವತಃ ಶ್ರೀಗಳ ಸಾನ್ನಿಧ್ಯದಲ್ಲಿ ಪುಸ್ತಕವನ್ನು ಸಮರ್ಪಿಸಿ ಅನುಗ್ರಹ ಮಂತ್ರಾಕ್ಷತೆ ಪ್ರಸಾದೊಂದಿಗೆ ಅದೇ ಪುಸ್ತಕವನ್ನು ಮರಳಿ ಪಡೆಯುವ ಅವಕಾಶವಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles