ಕಲಾರಸಿಕರ ಮನಸೆಳೆದ ನೃತ್ಯ ಪ್ರದರ್ಶನ

ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ, ನೃತ್ಯ ದಿಶಾ ಟ್ರಸ್ಟ್ (ರಿ.) ವತಿಯಿಂದ ಜುಲೈ 31, ಭಾನುವಾರ ಗುರು ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಎ. ಲಿಜ ಶ್ರೀನಿಧಿ, ಕು|| ನಿಹಾರಿಕಾ ಆರ್., ಕು|| ಪ್ರಣವಿ ಪ್ರಸನ್ನ ಹಾಗೂ ಕು|| ಉಮಾ ಜಿ. ಅವರು ಭರತನಾಟ್ಯ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.

‘ಕಲಾಯೋಗಿ’ ಶ್ರೀ ಸತೀಶ್ ಬಾಬು (ನಾಟ್ಯೇಶ್ವರ ನೃತ್ಯ ಶಾಲೆ, ಬೆಂಗಳೂರು), ಶ್ರೀ ಎಸ್. ಪಿನಾಕಪಾಣಿ (ಅಧ್ಯಕ್ಷರು, ವಚನಜ್ಯೋತಿ ಬಳಿಗೆ, ಬೆಂಗಳೂರು.) ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಭರತನಾಟ್ಯ ಮಾರ್ಗದ ಕೆಲವು ನೃ ತ್ಯಬಂಧಗಳ ಪ್ರಸ್ತುತಪಡಿಸಿದ ಈ ತಂಡ ವಿ|| ಭಾರತಿ ವೇಣುಗೋಪಲ್ ರಚನೆಯ ಹಂಸಧ್ವನಿ ರಾಗದ ಪುಷ್ಪಾಂಜಲಿ ಹಾಗೂ ಖಂಡ ನಡೆಯಲ್ಲಿ ಶ್ರೀ ಆದಿಶಂಕರಾಚಾರ್ಯರ ಅಜಂ ನಿರ್ವಿಕಲ್ಪ ಶ್ಲೋಕ ನರ್ತಿಸಿದರು.

ನೃತ್ಯ ಸಂಯೋಜನೆ ಗುರು ಶ್ರಿಮತಿ ದರ್ಶಿನಿ ಮಂಜುನಾಥ್ ಅವರದ್ದು. ಎರಡನೇ ನೃತ್ಯ ಅಲಾರಿಪು ಚತುರಶ್ರ ಜಾತಿ ಆದಿತಾಳ. ತೋಡಿ ರಾಗದ ತಂಜಾವೂರು ಸಹೋದರರ ರಚನೆ ಪ್ರಸ್ತುತಿ ನರ್ತಕಿಯರ ತಾಳ ಬದ್ಧತೆಗೆ ಸಾಕ್ಷಿಯಾಯಿತು. ಲಿಜಾ ಅವರು ಅನ್ನಮಾಚಾರ್ಯರ ಡೋಲಾಯo ಕೀರ್ತನೆ ಅನ್ನು ನರ್ತಿಸಿದರು. ಇದರಲ್ಲಿ ಅವರು ಅಮೋಘವಾಗಿ ವಿಷ್ಣುವಿನ ದಶಾವತಾರದ ಅಭಿನಯಿಸಿದರು.

ಬಸವಣ್ಣನವರ ವಚನ ನಾದಪ್ರಿಯ ಶಿವನೊಂಬರು ಪ್ರಾಣವಿ ಪ್ರಸನ್ನ ಅವರ ಅಭಿನಯದಲ್ಲಿ ಉತ್ತಮವಾಗಿ ಮೂಡಿಬಂತು. ರಾವಣ, ಬ್ರಹ್ಮನ ಅಹಂಕಾರ ಅವರ ಅವನತಿಗೆ ಕಾರಣವಾಯಿತು. ಶಿವ ಭಕ್ತಿ ಪ್ರಿಯ ಎಂಬುವುದನ್ನು ಉತ್ತಮವಾಗಿ ನರ್ತಿಸಿತೋರಿಸಿದರು .

ತಾಂಜಾವುರು ಶಂಕರ ಐಯ್ಯರ್ ಅವರ ರಂಜಿನಿಮಾಲ ಉತ್ತಮವಾಗಿ ನಿಹಾರಿಕಾ ನರ್ತಿಸಿದರು. ಕೃಷ್ಣ ತುಂಟಾಟ ತಾಯಿ ಯಶೋದೆಯ ಉತ್ತಮ ಸಂಭಾಷಣೆ ಯನ್ನು ನೃತ್ಯದಲ್ಲಿ ಪ್ರಸ್ತುತಪಡಿಸಿದರು ಉಮಾ. ಕೊನೆಯ ಪ್ರಸ್ತುತಿ Dr . ಬಾಲಮುರಳಿಕೃಷ್ಣ ರವರ ರಚನೆಯ ತಿಲ್ಲಾನ ಮೂಡಿ ಬಂತು.

ಎಲ್ಲ ನೃತ್ಯ ಬಂಧಗಳ ನೃತ್ಯ ಸಂಯೋಜನೆಯ ಗುರು. ಶ್ರೀಮತಿ . ದರ್ಶಿನಿ ಮಂಜುನಾಥ್ ರವರದಾಗಿತ್ತು. ಕಲಾ ರಸಿಕರ ಪ್ರಸಂಶೆಗೆ ಪ್ರತರವಾಯಿತು ಈ ಕಾರ್ಯಕ್ರಮ.

ನಟುವಾಂಗ : ಗುರು ವಿ|| ದರ್ಶಿನಿ ಮಂಜುನಾಥ್, ಹಾಡುಗಾರಿಕೆ – ವಿ|| ಭಾರತಿ ವೇಣುಗೋಪಾಲ್, ಮೃದಂಗ – ವಿ|| ಎಸ್. ವಿ. ಗಿರಿಧರ್, ಕೊಳಲು – ವಿ|| ನರಸಿಂಹಮೂರ್ತಿ, ಪಿಟೀಲು – ವಿ|| ಮಧುಸೂದನ್.

Related Articles

ಪ್ರತಿಕ್ರಿಯೆ ನೀಡಿ

Latest Articles