ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಸೆ. 23 ರಂದು ಬಿಜಿಎಸ್ ಸಭಾ ಮಂಟಪದಲ್ಲಿ ರಾಜ್ಯಮಟ್ಟದ 43ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳ ಉದ್ಘಾಟನೆ ಮತ್ತು ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಪೂಜ್ಯ ಸ್ವಾಮೀಜಿಯವರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಚುಂಚಶ್ರೀ ಪ್ರಶಸ್ತಿ ಪ್ರದಾನ

ಇದೇ ಸಂದರ್ಭದಲ್ಲಿ ಚುಂಚಶ್ರೀ ಪುರಸ್ಕೃತರಾದ ಪದ್ಮಶ್ರೀ ತುಳಸಿಗೌಡರವರು, ಉತ್ತರ ಕನ್ನಡ ಜಿಲ್ಲೆ, (ಪರಿಸರ), ಸಬೇಶ್ ಶಿವಾಚಾರ್ಯರವರು, ಬೆಂಗಳೂರು (ಧಾರ್ಮಿಕ ಕ್ಷೇತ್ರ) ಡಾ. ಕೆ.ಎಸ್. ಜಯರಾಮ್ ರವರು, ಮಂಡ್ಯ ಜಿಲ್ಲೆ (ಪಶು ವೈದ್ಯಕೀಯ ಸೇವೆ) ಕಬ್ಬಳಿ ರಂಗೇಗೌಡರವರು, ಹಾಸನ ಜಿಲ್ಲೆ (ಸಮಾಜ ಸೇವೆ) *ಡಾ. ಜಿ. ಗುರುರಾಜ್ ರವರು, ಮೈಸೂರು ಜಿಲ್ಲೆ (ಜಾನಪದ ಕ್ಷೇತ್ರ) ಇವರುಗಳನ್ನು ಪರಮಪೂಜ್ಯ ಮಹಾಸ್ವಾಮಿಜಿಯವರು ಗೌರವಿಸಿ ಆಶೀರ್ವದಿಸಿದರು.

ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರ ಮುತ್ತಿನ ಪಾಲಕಿ ಉತ್ಸವ

ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ 43ನೇ ರಾಜ್ಯಮಟ್ಟದ ಜಾನಪದ ಕಲಾ ಮೇಳದ ಪ್ರಯುಕ್ತ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳವರ ಮುತ್ತಿನ ಪಾಲಕಿ ಉತ್ಸವ, ಜಾನಪದ ಕಲಾವಿದರ ಮೆರವಣಿಗೆ ಹಾಗೂ ಶ್ರೀ ಕಾಲಭೈರೇಶ್ವರ ಸ್ವಾಮಿ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠಗಳ ಪೂಜ್ಯ ಸ್ವಾಮೀಜಿಗಳವರು, ಜಾನಪದ ಕಲಾವಿದರು ಹಾಗೂ ಶ್ರೀಮಠದ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೇರಿತು.

Related Articles

ಪ್ರತಿಕ್ರಿಯೆ ನೀಡಿ

Latest Articles