ವೈವಿಧ್ಯಮಯ ನೃತ್ಯ ಹಬ್ಬ

 ಬೆಂಗಳೂರು: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯು ಬೆಂಗಳೂರಿನ ಜೆ.ಸಿ ರಸ್ತೆ ಯಲ್ಲಿರುವ ನಯನ ಸಭಾಂಗಣದಲ್ಲಿ ನೃತ್ಯ ಸಂಹಿತ ಎನ್ನುವ ವೈವಿಧ್ಯಮಯ ನೃತ್ಯ ಹಬ್ಬವನ್ನು ಆಗಸ್ಟ್  20,  ಭಾನುವಾರ ಸಂಜೆ 4.30 ಗಂಟೆಗೆ ಆಚರಿಸುತ್ತಿದ್ದಾರೆ.

ಡಾ. ಭಾಗ್ಯಶ್ರೀ ಕಡಬಾ ರವರ ಸಂಸ್ಥೆ ಶ್ರೀ ನೃತ್ಯ ಕಲಾಕೇಂದ್ರ ಉಡುಪಿ, ಪಡುಬಿದ್ರೆ, ಶ್ರೀಮತಿ ರೂಪ ಗಿರೀಶ್ ರವರ ಸಂಸ್ಥೆ ನೃತ್ಯ ಲಹರಿ ಕಲಾಕೇಂದ್ರ, ಬೆಂಗಳೂರು, ಶ್ರೀಮತಿ ದರ್ಶಿನಿ ಮಂಜುನಾಥ್ ರವರ ಸಂಸ್ಥೆ ಶ್ರೀ ನೃತ್ಯ ದಿಶಾ ಟ್ರಸ್ಟ್, ಬೆಂಗಳೂರು, ಶ್ರೀಮತಿ ರೋಹಿಣಿ ಶ್ರೀಧರ್ ರವರ ಸಂಸ್ಥೆ ಕಲಾರಾಧನಾ ಪ್ರತಿಷ್ಠಾನ, ಬೆಂಗಳೂರು, ಶ್ರೀಮತಿ ಗಾಯತ್ರಿ ಮಯ್ಯ ರವರ ಸಂಸ್ಥೆಯ ತಮೋಹ ಆರ್ಟ್ಸ್ ಫೌಂಡೇಶನ್ ಇಂದ ಕು|| ಆದ್ಯ ಮಯ್ಯ ರವರು ಹಾಗೂ ಪ್ರಣವಾಂಜಲಿ ಸಂಸ್ಥೆಯ ನೃತ್ಯ ಕಲಾವಿದರಿಂದ ನೃತ್ಯ ಕಾರ್ಯಕ್ರಮವಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲ್ಲಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ನಮ್ರತಾ ಎನ್., ಅನಾದ್ಯ ಸಂಸ್ಥೆಯ ನಿರ್ದೇಶಕಿ ಕಥಕ್ ನೃತ್ಯಕಲಾವಿದೆ ಶ್ರೀಮತಿ ಅರ್ಪಿತಾ ಬ್ಯಾನರ್ಜಿ ರವರು ಮತ್ತು ಡಾ. ಪವಿತ್ರ ಸಾಂಸ್ಕೃತಿಕ ಸಂಯೋಜಕರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಸಂಯೋಜಕರು, ಪ್ರದರ್ಶನ ಕಲಾ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು,  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶ್ರೀಮತಿ ಪವಿತ್ರ ಪ್ರಶಾಂತ್ ರವರು ಎಲ್ಲರಿಗೂ ಸ್ವಾಗತ ಕೋರಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles