ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆ

ಆ.31ರಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಆರಂಭ | ಸೆ.1ರಂದು ರಾಯರ ಮಧ್ಯಾರಾಧನೆ| ಸೆ.2ರಂದು ವಿವಿಧೆಡೆ ರಾಜಬೀದಿಯಲ್ಲಿರಥೋತ್ಸವ

ಬೆಂಗಳೂರಿನಲ್ಲಿ ಅಲ್ಲಲ್ಲಿ ವಿವಿಧ ಕಾರ್ಯಕ್ರಮ
ಮಲ್ಲೇಶ್ವರ ಶ್ರೀ ರಾಘವೇಂದ್ರ ಸೇವಾ ಸಮಿತಿ, ಸುಧೀಂದ್ರ ನಗರ 6ನೇ ಕ್ರಾಸ್‌:
ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆ.23ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆ. 26ರಂದು ಸುದರ್ಶನ ಹೋಮ, ಸಂಜೆ 6.30ಕ್ಕೆ ಯಕ್ಷಗಾನ ನಡೆಯಲಿದೆ. 27ರಂದು ಸಂಜೆ 6.30ಕ್ಕೆ ಶ್ರೀವತ್ಸಾಚಾರ್‌ ಅವರಿಂದ ಪ್ರವಚನ, 28ರಂದು ವಿಶೇಷ ಪೂಜೆ, ಸಂಜೆ ವಿದ್ವಾನ್‌ ಖೇಡಾ ಪ್ರಮೋದಾಚಾರ್‌ ಅವರಿಂದ ಪ್ರವಚನ, 29ರಂದು ಋುಗ್ವೇದ ಉಪಾಕರ್ಮ, ಸಂಜೆ ದಾಸವಾಣಿ, 30ರಂದು ಯಜುರ್ವೇದ ಉಪಾಕರ್ಮ, ಸಂಜೆ ವಿದ್ವಾನ್‌ ಶ್ರೀನಿಧಿ ಆಚಾರ್‌ ಅವರಿಂದ ಪ್ರವಚನ, 31ರಂದು ಶ್ರೀ ರಾಯರ ಪೂರ್ವಾರಾಧನೆ, ಸಂಜೆ ವಿದ್ವಾನ್‌ ಚಂದ್ರಶೇಖರ ಆಚಾರ್ಯ ಅವರಿಂದ ಪ್ರವಚನ, ಸೆ.1ರಂದು ಶ್ರೀ ಗುರುಸಾರ್ವಭೌಮರ ಮಧ್ಯಾರಾಧನೆ, ಸಂಜೆ ವಿದ್ವಾನ್‌ ಆನಂದ ತೀರ್ಥಾಚಾರ್‌ ಮಾಳಗಿ ಅವರಿಂದ ಪ್ರವಚನ, Ó2ರಂದು ಉತ್ತರಾರಾಧನೆ, ಸಂಜೆ ವಿ.ಮರುತಾಚಾರ್‌ ಅವರಿಂದ ಪ್ರವಚನ. 3ರಂದು ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ, ಸಂಜೆಕಲ್ಯಾ ಶ್ರೀಕಾಂತಾಚಾರ್‌ ಅವರಿಂದ ಪ್ರವಚನ.

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಶೇಷಾದ್ರಿಪುರಂ:
ಶ್ರೀ ಗುರುರಾಯರ ಆರಾಧನೆ ಪ್ರಯುಕ್ತ ಆ.30ರಿಂದ ಸೆ.3ರವರೆಗೆ ನಡೆಯಲಿದ್ದು, ವಿವಿಧ ಸೇವಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆರಾಧನಾ ಪಂಚರಾತ್ರೋತ್ಸವ ದಿನಗಳಂದು ಬೆಳಗ್ಗೆ 5ರಿಂದ ಸುಪ್ರಭಾತ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಸಂಜೆ ದೀವಟಿಗೆ ಸೇವೆ, ಉತ್ಸವ ನಡೆಯಲಿದೆ. 31, ಸೆ.1, 2 ರಂದು ಸಂಜೆ 7ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ.

ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಸೀತಾಪತಿ, ಅಗ್ರಹಾರ:
ಆ.29ರಂದು ಋುಗ್ವೇದಿ ಉಪಾಕರ್ಮ, 30ರಂದು ಬೆಳಗ್ಗೆ ಸತ್ಯನಾರಾಯಣ ಸ್ವಾಮಿ ಪೂಜಾ, ಯಜುರ್ವೇದ ಉಪಾಕರ್ಮ, ಸಂಜೆ ಗೋಪೂಜೆ, ಲಕ್ಷ್ಮೇಪೂಜೆ, 31ರಂದು ಬೆಳಗ್ಗೆ ಪಂಚಾಮೃತ ಅಭಿಷೇಕ, ಅರ್ಚನೆ, ಕನಕಾಭಿಷೇಕ, ಸೆ.1ರಂದು ಪಂಚಾಮೃ ಅಭಿಷೇಕ, ಪಾದಪೂಜೆ, ಮಹಾಮಂಗಳಾರತಿ, ಸಂಜೆ ರಥೋತ್ಸವ, ಸೆ. 2ರಂದು ವಿಶೇಷ ಪಂಚಾಮೃತ ಅಭಿಷೇಕ, ರಾಜಬೀದಿಗಳಲ್ಲಿಮಹಾರಥೋತ್ಸವ ನಡೆಯಲಿದೆ. ಪ್ರತಿದಿನ ಸಂಜೆ 6 ಗಂಟೆಯಿಂದ ದಾಸವಾಣಿ ಕಾರ್ಯಕ್ರಮ ಇರಲಿದೆ.

ಶ್ರೀ ಗುರುರಾಘವೇಂದ್ರ ಸೇವಾ ಸಮಿತಿ ಪ್ರಕಾಶನಗರ: ಶ್ರೀ ಗುರುರಾಯರ ಆರಾಧನೆ ದಿನಗಳಂದು ಪಂಚಾಮೃತ ಅಭಿಷೇಕ, ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಭಜನೆ, ಸೆ.2ರಂದು ರಾಜಬೀದಿ ರಥೋತ್ಸವ ನಡೆಯಲಿದೆ. ಆ.28ರಿಂದ ಸೆ.2 ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ವಿವಿಧ ಕಲಾವಿದರಿಂದ ಗಾಯನ ಕಾರ್ಯಕ್ರಮ ಇರಲಿದೆ.
ಆ.29ರಂದು ಬೆಳಗ್ಗೆ 7.30ಕ್ಕೆ ಋುಗ್ವೇದ ಉಪಾಕರ್ಮ, 30ರಂದು ಯಜುರ್ವೇದ ಉಪಾಕರ್ಮ.

Related Articles

ಪ್ರತಿಕ್ರಿಯೆ ನೀಡಿ

Latest Articles