ಶ್ರಾದ್ಧ ಮಾಡುವಾಗ ಪಾಲಿಸಬೇಕಾದ ನಿಯಮಗಳು

ಶ್ರಾದ್ಧ ಮಾಡುವ ದಿನ ಮನೆ ಮುಂದೆ ರಂಗೋಲಿ ಹಾಕಬಾರದು ತಲೆಗೆ ಎಣ್ಣೆ ಹಚ್ಚಿಕೊಳ್ಳಬಾರದು, ಕೂದಲು ಬಾಚಿಕೊಳ್ಳಬಾರದು.

ಆದಷ್ಟು ಮನೆಯಲ್ಲಿ ಶ್ರಾದ್ಧ ಮಾಡುವುದು ಅತ್ಯುತ್ತಮ. ಹಿರಿಯರು ಹುಟ್ಟಿದ ಮನೆ, ಅಲ್ಲದೆ, ಮನೆಯಲ್ಲಿರೋ ಮಕ್ಕಳು, ಮೊಮ್ಮಕ್ಕಳು ಅವರ ಪ್ರಸಾದ ಸ್ವೀಕಾರ ಮಾಡಿ, ಹಿರಿಯರ ಆಶೀರ್ವಾದ ಪಡೆಯುತ್ತಾರೆ.

ಅವಿಧವಾ ನವಮಿ ದಿನ ಸ್ರೀಯರು ಎಲ್ಲರೂ ಮುತ್ತೈದೆಗೆ ಸೀರೆ, ಕುಪ್ಪುಸ, ಬಳೆ, ಹೂವು, ಕೊಟ್ಟು ಉಡಿ ತುಂಬಬೇಕು, ( ತಮ್ಮ ಶಕ್ತ್ಯಾನುಸಾರ ) ಮನೆಯಲ್ಲಿ ಅವಿಧವಾ ನವಮಿ ಆಚರಿಸುವ ಅಗತ್ಯ ಇಲ್ಲದಿದ್ರೂ ತುಂಬಬೇಕು.

ಪಕ್ಷ ಮಾಸ ಅಂದ್ರೆ ಬೇರೇನೂ ಅಲ್ಲ., ಪಿತೃ ದೇವತೆಗಳ ಪೂಜೆ, ಅವರ ಅಂತರ್ಯಾಮಿಯಾಗಿರುವ ಭಗವಂತನ ಪೂಜೆ. ಪಿತೃ ದೇವತೆಗಳು, ನಮ್ಮ ಹಿರಿಯರಿಗೆ ಸದ್ಗತಿ ಕೊಡುವವರು.

Related Articles

ಪ್ರತಿಕ್ರಿಯೆ ನೀಡಿ

Latest Articles