ನಾಗರಾಜಕುಮಾರಿ ಉಲೂಪಿ

ಉಲೂಪಿ ಸರ್ಪರಾಜ ಕೌರವ್ಯನ ಮಗಳು. ಗಂಗಾನದಿಯ ಆಳವಾದ ನದಿನೀರಿನಲ್ಲಿರುವ ಹಾವುಗಳ ಸಾಮ್ರಾಜ್ಯಕ್ಕೆ ಈತನೇ ಒಡೆಯ. ಅರ್ಜುನನ ಮತ್ತೊಬ್ಬಳು ಹೆಂಡತಿ ಚಿತ್ರಾಂಗದೆಯ ಮಗ ಬಬ್ರುವಾಹನನಿಂದ ಯುದ್ಧ ಕಲೆಯನ್ನು ಕಲಿತಿದ್ದಳು. ಬಬ್ರುವಾಹನನಿಂದ ಮರಣ ಹೊಂದಿದ ಅರ್ಜುನ ಉಲೂಪಿಯಿಂದ ಮರುಜನ್ಮ ಪಡೆಯುತ್ತಾನೆ.

ಪಂಚಪಾಂಡವರು ದ್ರೌಪದಿಯನ್ನು ಮದುವೆಯಾಗುತ್ತಾರೆ. `ಅರಮನೆಯಲ್ಲಿ ದ್ರೌಪದಿಯೊಂದಿಗೆ ಒಬ್ಬೊಬ್ಬರು ಒಂದು ವರ್ಷ ಇರುವುದು ಮತ್ತು ಯಾರು ಅರಮನೆಯಲ್ಲಿ ದ್ರೌಪದಿಯೊಂದಿಗೆ ಇರುತ್ತಾರೋ ಆ ಸಮಯದಲ್ಲಿ ಉಳಿದ ನಾಲ್ಕು ಮಂದಿ ಪಾಂಡವರು ಅರಮನೆಯನ್ನು ಪ್ರವೇಶಿಸುವಂತಿಲ್ಲ. ಮದುವೆಯ ಈ ಒಪ್ಪಂದ ಮುರಿದವರನ್ನು ಒಂದು ವರ್ಷ ಗಡಿಪಾರು ಮಾಡಲಾಗುವುದು’ ಎಂಬುದಾಗಿ ನಿರ್ಧಾರಕ್ಕೆ ಬರುತ್ತಾರೆ.
ಒಂದೊಮ್ಮೆ ಅರಮನೆಯಲ್ಲಿ ಗಾಂಢೀವವನ್ನು ಮರೆತಿದ್ದ ಅರ್ಜುನ ಅದನ್ನು ತರಲೆಂದು ಅರಮನೆಗೆ ಹೋಗುತ್ತಾನೆ. ಪಾಂಡವರ ಮೂರನೇ ಸಹೋದರನಾದ ಅರ್ಜುನನನ್ನು ಇಂದ್ರಪ್ರಸ್ಥ (ಪಾಂಡವ ರಾಜ್ಯದ ರಾಜಧಾನಿ)ಯಿಂದ ಪಾಂಡವ ಸಹೋದರರ ಸರ್ವಸಮಾನ ಪತ್ನಿಯಾದ ದ್ರೌಪದಿಯೊಂದಿಗಿನ ಮದುವೆಯ ನಿಯಮಗಳನ್ನು ಮೀರಿದ್ದಕ್ಕಾಗಿ ಒಂದು ವರ್ಷದ ಪ್ರಾಯಶ್ಚಿತ್ತದ ತೀರ್ಥಯಾತ್ರೆಗೆ ಹೋಗಲು ಗಡೀಪಾರು ಮಾಡಲಾಗುತ್ತದೆ. ಅರ್ಜುನನು ಭಾರತದ ಉತ್ತರ-ಪೂರ್ವ ಪ್ರಾಂತ್ಯಕ್ಕೆ ತಲುಪುತ್ತಾನೆ. ಅಲ್ಲಿ ಅವನು ಪ್ರತಿದಿನ ಬೆಳಗ್ಗೆ ಎದ್ದು ಗಂಗಾನದಿಯಲ್ಲಿ ಸ್ನಾನ ಮಾಡುತ್ತಾನೆ. ಅವನು ಗಂಗಾನದಿಯ ಆಳಕ್ಕೆ ಹೋಗಿ ಸ್ನಾನ ಮಾಡುವಂತಹ ಸಾಮಥ್ರ್ಯವನ್ನು ಹೊಂದಿರುತ್ತಾನೆ. ಅಲ್ಲಿ ಸರ್ಪಗಳ ಸಾಮ್ರಾಜ್ಯ ಇರುತ್ತದೆ. ಸರ್ಪ ಸಾಮ್ರಾಜ್ಯದ ಒಡೆಯನ ಮಗಳು ಉಲೂಪಿ ಎಂಬ ನಾಗಕನ್ಯೆ ಆತನನ್ನು ನೋಡುತ್ತಾಳೆ. ಆತನ ಸೌಂದರ್ಯಕ್ಕೆ ಮಾರು ಹೋಗಿ ತನ್ನನ್ನು ಪ್ರೀತಿಸುವಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೊಪ್ಪಿದ ಅರ್ಜುನ ಅವಳನ್ನು ಮದುವೆಯಾಗಿ ಅವಳೊಂದಿಗೆ ಒಂದು ದಿನ ಕಳೆಯುತ್ತಾನೆ. ಐರಾವಣ ಎಂಬ ಹೆಸರಿನ ಮಗನನ್ನು ಪಡೆಯುತ್ತಾರೆ.  ನಂತರ ಅರ್ಜುನನು ಐರಾವಣ ಮತ್ತು ಉಲೂಪಿಯನ್ನು ನಾಗಗಳ ನಿವಾಸಸ್ಥಾನವಾದ ನಾಗಲೋಕದಲ್ಲಿ ಬಿಟ್ಟು ತೀರ್ಥಯಾತ್ರೆಯನ್ನು ಮುಂದುವರೆಸುತ್ತಾನೆ.
ಕೆಲವು ವರ್ಷಗಳ ನಂತರ ಪಾಂಡವರು ಅಶ್ವಮೇಧ ಯಾಗವನ್ನು ನಡೆಸುತ್ತಿರುತ್ತಾರೆ. ಶ್ವೇತಾಶ್ವ ಬಬ್ರುವಾಹನನ ಸಾಮ್ರಾಜ್ಯವನ್ನು ಪ್ರವೇಶಿಸುತ್ತದೆ. ಅರ್ಜುನ ತನ್ನ ತಂದೆ ಎಂಬುದು ಬಬ್ರುವಾಹನನಿಗೆ ತಿಳಿದಿರುವುದಿಲ್ಲ. ಅವರಿಬ್ಬರ ನಡುವೆ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಬಬ್ರುವಾಹನನ ಬಾಣದಿಂದ ಅರ್ಜುನ ಧರೆಗುರುಳುತ್ತಾನೆ.
 ಕುರುಕ್ಷೇತ್ರ ಯುದ್ಧದಲ್ಲಿ ಶಿಖಂಡಿಯನ್ನು ಮುಂದೆ ನಿಲ್ಲಿಸಿ ಯುದ್ಧ ಮಾಡುವಂತೆ ಹೇಳಿದಾಗ ಭೀಷ್ಮರು ಶಸ್ತ್ರಾಸ್ತ್ರ  ತ್ಯಜಿಸುತ್ತಾರೆ. ಅರ್ಜುನ ಭೀಷ್ಮರನ್ನು ಸಾಯಿಸುತ್ತಾನೆ. ಆಗ ಗಂಗೆ, `ಮಗನಿಂದಲೇ ನಿನಗೆ ಸಾವು ಬರಲಿ’ ಎಂದು ಅರ್ಜುನನಿಗೆ ಶಾಪವನ್ನಿತ್ತಿರುತ್ತಾಳೆ. ಗಂಗೆ ಅರ್ಜುನನಿಗೆ ಶಾಪ ನೀಡಿದ ವಿಷಯ ಉಲೂಪಿಗೆ ತಿಳಿದಿರುತ್ತದೆ. ಮಗನಿಂದ ಅರ್ಜುನ ಹತನಾದಾಗ ಉಲುಪಿ ಗಂಗೆಯನ್ನು ಪ್ರಾರ್ಥಿಸಿ ಆತನನ್ನು ಬದುಕಿಸುತ್ತಾಳೆ. ಉಲೂಪಿಯೇ ತಂದೆ- ಮಗ ಅರ್ಜುನ -ಬಬ್ರುವಾಹನನ್ನು ಒಂದು ಮಾಡುತ್ತಾಳೆ.

Related Articles

ಪ್ರತಿಕ್ರಿಯೆ ನೀಡಿ

Latest Articles