ಅಶ್ವಗಂಧ ಒಂದು, ಲಾಭ ಹಲವು

ಅಶ್ವಗಂಧ ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧೀಯ ಗಿಡ. ಇದರ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರ ಕಷಾಯವನ್ನು ಹೇಗೆ ತಯಾರಿಸಬೇಕು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಅಶ್ವಗಂಧ ಕಷಾಯ ತಯಾರಿಸುವ ವಿಧಾನ: ಅರ್ಧ ಚಮಚ ಅಶ್ವಗಂಧ ಪುಡಿಯನ್ನು ಎರಡು ಕಪ್ ನೀರಿಗೆ ಹಾಕಿ ಕುದಿಸಿ ನಂತರ ಅದಕ್ಕೆ ಒಂದು ಸಣ್ಣ ತುಂಡು ಶುಂಠಿ ಹಾಕಿ. ನಂತರ ಎರಡು ಲೋಟ ನೀರು ಒಂದು ಲೋಟ ಆಗುವವರೆಗೂ ಕಾಯಿರಿ. ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ.

ಇದರಿಂದ ದೇಹಕ್ಕಾಗುವ ಪ್ರಯೋಜನಗಳು:

ಸಂಧಿವಾತ, ಮಲಬದ್ಧತೆ, ನಿದ್ರಾಹೀನತೆ, ನರ ದೌರ್ಬಲ್ಯ, ದೀರ್ಘಕಾಲದ ಒತ್ತಡ, ಉರಿಯೂತ
ಹಾರ್ಮೊನ್ ಅಸಮತೋಲನದಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

1) ಲೋ ಬ್ಲಡ್ ಶುಗರ್: ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗದಂತೆ ಇದು ಕಾಪಾಡುತ್ತದೆ. ಡಯಾಬಿಟಿಸ್ ಇರುವವರು ಅಶ್ವಗಂಧವನ್ನು ಸೇವಿಸುವುದು ಉತ್ತಮ.

2. ಸ್ಟ್ರೆಸ್ ಕಡಿಮೆ: ಹೆಚ್ಚಿನವರಲ್ಲಿ ಅನೇಕ ಕಾರಣಗಳಿಂದ ಮಾನಸಿಕ ಒತ್ತಡ ಕಂಡುಬರುತ್ತದೆ. ಇದನ್ನು ಅಶ್ವಗಂಧ ಹೋಗಲಾಡಿಸುತ್ತದೆ. ಸ್ಟ್ರೆಸ್ ಮಾಡುವ ಹಾರ್ಮೋನ್ ಗಳನ್ನು ಅಶ್ವಗಂಧ ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳುತ್ತದೆ.

3. ಖಿನ್ನತೆ ನಿವಾರಿಸುತ್ತದೆ: ನಿಯಮಿತವಾಗಿ ಅಶ್ವಗಂಧ ಕಷಾಯ ಕುಡಿಯುವುದರಿಂದ ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ. ದೇಹಕ್ಕೆ ಚೈತನ್ಯ ನೀಡುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles