ಸಂಕ್ರಾಂತಿಗೆ ಕನ್ನಡ ಪದಗಳ ಚೀಲ, ಬೆಳ್ಳಿ ಕ್ರಿಯೇಷನ್ಸ್ನಿಂದ ಹೊಸ ವಿನ್ಯಾಸ

ಬೆಂಗಳೂರು: ಪ್ರತಿ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಈ ಬಾರಿ ಕೊರೊನಾ ಸ್ವಲ್ಪ ಅಡ್ಡಿಯಾಗಿದೆ. ಆದರೇನಂತೆ ಪರಸ್ಪರ ಬಾಂಧವ್ಯ ಬೆಸೆಯುವ, ಎಳ್ಳು ಬೆಲ್ಲ ಹಂಚಿ ಸಂಭ್ರಮಿಸುವ ಈ ಹಬ್ಬಕ್ಕೆ ವಿಶೇಷ ಎಂಬಂತೆ ಬೆಂಗಳೂರಿನ ಗಿರಿನಗರದಲ್ಲಿರುವ ಬೆಳ್ಳಿ ಕ್ರಿಯೇಷನ್ಸ್ ಹೊಸ ವಿನ್ಯಾಸದ ಬಟ್ಟೆಚೀಲಗಳನ್ನು ಬಿಡುಗಡೆಗೊಳಿಸಿದೆ.
“ಸಂಕ್ರಾಂತಿಗೆ ಪ್ಲಾಸ್ಟಿಕ್ ಡಬ್ಬಿ, ಟ್ರೇ ತ್ಯಜಿಸಿ, ಕನ್ನಡ ಬಳಸಿ, ಪರಿಸರ ಉಳಿಸಿ’ ಎಂಬ ಆಶಯದೊಂದಿಗೆ ಎಳ್ಳು ಬೆಲ್ಲಕ್ಕೆ ಬಟ್ಟೆಯಿಂದ ಮಾಡಿದ ಪುಟಾಣಿ ಪೌಚ್, ಕಬ್ಬು ಬಾಳೆಗೆ ಚಿಕ್ಕ ಚೀಲವನ್ನು ವಿನ್ಯಾಸಗೊಳಿಸಿದೆ. ಮಾತ್ರವಲ್ಲ ಕನ್ನಡ ಪದಗಳ ಶುಭಾಶಯ ಸಂದೇಶಗಳನ್ನು ಒಳಗೊಂಡಿದೆ. 5/5 ಇಂಚಿನ ನ ಒಂದು ಪೌಚ್‌ನ ಬೆಲೆ ರೂ. 15. ಕೆಂಪು ಹಾಗೂ ಹಸಿರು ಬಣ್ಣದಲ್ಲಿ ಲಭ್ಯ.

ಆಸಕ್ತರು 8971800223 ನ್ನು ಸಂಪರ್ಕಿಸಬಹುದು. ಅಥವಾ ಬೆಳ್ಳಿ ಕ್ರಿಯೇಷನ್ಸ್ ಪ್ರೈ .ಲಿ. ಗಿರಿನಗರ ಬೆಂಗಳೂರು ಇಲ್ಲಿ ಪಡೆದುಕೊಳ್ಳಬಹುದು. 

ಕನ್ನಡ ಪ್ರೇಮವೂ , ಪರಿಸರ ಪ್ರೇಮವೂ ಎರಡಕ್ಕೂ ಬೆಳ್ಳಿಕಿರಣ

ಬೆಳ್ಳಿಕಿರಣ ಕ್ರಿಯೇಷನ್ಸ್ ಮುಖ್ಯಸ್ಥೆಅರುಣಾ, ಬಟ್ಟೆ ಚೀಲದ ಜತೆಗೆ ಕನ್ನಡದ ಶುಭಾಶಯಗಳನ್ನೊಳಗೊಂಡ ಸಂದೇಶಗಳನ್ನು ಬರೆಸುವ ಯೋಚನೆ, ಯೋಜನೆ ಹೇಗೆ ಬಂತು ಎಂಬುದರ ಕುರಿತು ಇಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ಲಾಸ್ಟಿಕ್ ನಿಷೇಧಕ್ಕಿಂತಲೂ ಮೊದಲು ನೂರಾರು ಜನ ವಿರುದ್ಧ ಮಾತನಾಡುತ್ತಲೇ ಬಂದವರು ಇದ್ದಾರೆ, ಬೆಳ್ಳಿಕಿರಣ ಕ್ರಿಯೇಷನ್ಸ್ ಅವರು ತಾವು ಪ್ಲಾಸ್ಟಿಕ್ ವಿರೋಧ ಮಾತನಾಡಿದಲ್ಲದೆ, ಅದಕ್ಕೆ ಪರ್ಯಾಯ ಹಾಗು ಸಮರ್ಪಕವಾಗಿ ತೋರುವ ಉತ್ಪಾದನೆ ಮಾಡುವ ಬಗೆಯನ್ನು ಯೋಚಿಸಿತು. ಇವೆಲ್ಲದರ ಜತೆಗೆ ಏನೆಂದರೆ, ಅದರ ಮೇಲೆ ಕನ್ನಡದ ಕಂಪು ಪಸರಿಸುವುದು. ಸಂಕ್ರಾಂತಿ ಹಬ್ಬದ ಸಮಯಕ್ಕೂ ಮುನ್ನ ಪ್ಲಾಸ್ಟಿಕ್ ಬಗ್ಗೆ ಯಾಕೆ ಜನಕ್ಕೆ ಜಾಗೃತಿ ಮೂಡಿಸಬಾರದು ಅಂತ ಯೋಚನೆ ಬಂತು. ನಮಗೆ ಇದಕ್ಕೆ ಪೂರಕವಾಗಿ ಬಂದವರು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವ ಸ್ಲಂ ನಿವಾಸಿಗಳು. ಅದರಲ್ಲೂ ಮಹಿಳೆಯರು. ಇವರಿಗೆಲ್ಲ NGO ಕಾಟನ್ ಚೀಲ ಹೊಳೆಯಲು ತಯಾರಿ ಮಾಡಿದ್ದರು. ಇವರ ಸಹಾಯದಿಂದ, ಸಂಕ್ರಾಂತಿ ಹಬ್ಬಕ್ಕೆ ಎರಡು ಬಗೆ ಚೀಲ ಹೊಲೆಸಿದೆವು. ದೊಡ್ಡ ಚೀಲ ಕಬ್ಬು ಬಾಳೆ ತೆಂಗು ಹಿಡಿಯಲು, ಪುಟಾಣಿ ಚೀಲ ಎಳ್ಳು ಬೆಲ್ಲ ಅಚ್ಚು ಹಾಕಲು. ಹಬ್ಬಕ್ಕೂ ಮೊದಲು ಹೊಲಿಸಿ, ಮನೆಯವರಿಂದಲೇ ಬೋಣಿ ಮಾಡಿಸಿದೆವು. ಅಮ್ಮ, ಚಿಕ್ಕಮ್ಮ ಎಲ್ಲರು ಹಬ್ಬಕ್ಕೂ ಒಂದು ತಿಂಗ್ಳು ಮೊದಲೇ ಕೊಂಡುಕೊಂಡರು. ಒಬ್ಬರಿಂದ ಒಬ್ಬರಿಗೆ ಹೋಗಿ, ಫೇಸ್ಬುಕ್ ಸಹಾಯದಿಂದ, ನೂರಾರು ಜನಕ್ಕೆ ಹೋಯಿತು. ಸುಮಾರು 9000 ಚೀಲ ಮಾರಿದ್ದೆವು.

” ನಾವು ಕನ್ನಡ ಬಗ್ಗೆ ಮಾಡಲು ಹೊರಟಾಗ, ಕೆಲವರು ಆಡಿಕೊಂಡಿದುಂಟು, ನಮಗೂ ತಳಮಳ ಇತ್ತು. ಆದರೆ, ಈಗೀಗ ಜನರು, ಕನ್ನಡದಲ್ಲಿ ಬರೆದು ಕೊಡಿ ಅಂತಾರೆ. ಗ್ರಾಹಕರಿಗೆ ಬೇಕಾಗುವಂತೆ, ವೈಯಕ್ತಿಕ ಆಸಕ್ತಿಗೆ ಅನುಗುಣವಾಗಿ ಪದಗಳನ್ನು ಬರೆಯುತ್ತೇವೆ . ಇದು ಜನರಿಗೆ ಇಷ್ಟ ಆಗುತ್ತದೆ.

– ಅರುಣಾ, ಬೆಳ್ಳಿಕಿರಣ ಕ್ರಿಯೇಷನ್ಸ್ ಮುಖ್ಯಸ್ಥೆ

ಅಲ್ಲಿಂದ ಶುರುವಾಗಿದ್ದು ಹೊಸ ಅಧ್ಯಾಯ. ಸಂಕ್ರಾಂತಿ ಮುಗಿದ ಮೇಲೆ ಯಾರಿಗೆ ಬೇಕು ಚೀಲ ಅನ್ಕೊಂಡ್ವಿ, ಮಹಿಳೆಯರಿಗೆ ಹೇಗೆ ಕೆಲಸ ಕೊಡುವುದು ಅಂತ. ಹೀಗೆ ಯೋಚನೆಯಲ್ಲಿ ಆಗಿದ್ದೆ ಪ್ಲಾಸ್ಟಿಕ್ ನಿರ್ಮೂಲನೆ ಯಾಕೆ ಮಾಡಬಾರದು, ನಮ್ಮ ಕೈಯಲ್ಲಿ ಆಗಿದಷ್ಟು ಅಂತ, ಪ್ಲಾಸ್ಟಿಕ್ ಚೀಲ ಎಲ್ಲೆಲ್ಲಿ ಬಳಕೆ ಆಗತ್ತೋ ಅಲ್ಲಲ್ಲಿ, ಬಟ್ಟೆ ಚೀಲ ಮಾಡಿಸುತ್ತ ಹೋದೆವು.

ತಾಂಬೂಲ ಚೀಲ, ಸೀರೆ ಚೀಲ, ಶಾಪಿಂಗ್ ಚೀಲ, ಸಿರಿಧಾನ್ಯ ಅಂಗಡಿಗಳಲ್ಲಿ ಬಟ್ಟೆ ಚೀಲ, ಸಿಡಿಗೂ ಚೀಲ, ಬ್ಲೌಸ್ ಪೀಸ್ ಇಡುವ ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಚೀಲ, ಫ್ರಿಡ್ಜ್ ಒಳಗೆ ತರಕಾರಿ ಇಡಲು ಮಾಡಿರುವ ಚೀಲ, ಬೇಸಿಗೆ ಶಿಬಿರದಲ್ಲಿ ಕೊಡುವ ಚೀಲ, ಒಂದೇ ಎರೆಡೇ, ಎಲ್ಲದಕ್ಕೂ ಬಟ್ಟೆ ಚೀಲ ಮಾಡಿ ಹೊಸ ಮಾರುಕಟ್ಟೆ ಸೃಷ್ಟಿಸಿಕೊಂಡೆವು ಎನ್ನುತ್ತಾರವರು.

Related Articles

ಪ್ರತಿಕ್ರಿಯೆ ನೀಡಿ

Latest Articles