ದೇಹತೂಕ ಇಳಿಸಿಕೊಳ್ಳಲು ಸಿಹಿಗುಂಬಳಕಾಯಿ ಬೀಜ

ಆರೋಗ್ಯಕರ ಜೀವನ ನಡೆಸಬೇಕೆಂದರೆ ನಮ್ಮ ಆಹಾರ ಶೈಲಿ ಕೂಡ ಪ್ರಮುಖವಾಗಿರುತ್ತದೆ. ಹೆಚ್ಚಿನವರ ಸಮಸ್ಯೆ ಹೊಟ್ಟೆ ಹಾಗೂ ಸೊಂಟದ ಸುತ್ತ ಸಂಗ್ರಹವಾಗುತ್ತಿರುವ ಬೊಜ್ಜು. ಕೆಲವರು ಡಯಟ್ ಹೆಸರಿನಲ್ಲಿ ದೇಹಕ್ಕೆ ಅಗ್ಯತವಾದ ಪೋಷಕಾಂಶಗಳನ್ನು ನೀಡುವುದೇ ಇಲ್ಲ. ಇದರಿಂದ ಆರೋಗ್ಯಕ್ಕೆ ಅಪಾಯಕಾರಿ. ನಾವು ತೂಕ ಇಳಿಕೆಗೆ ಆಹಾರವನ್ನು ಸೇವಿಸುವಾಗ ಪೋಷಕಾಂಶಗಳಿರುವ ಆಹಾರವನ್ನು ಸೇವಿಸಬೇಕು.

ಸಿಹಿ ಕುಂಬಳಕಾಯಿ ಬೀಜದ ಪ್ರಯೋಜನಗಳು: ಸಿಹಿ ಕುಂಬಳಕಾಯಿ ಬೀಜ ಬಿಸಾಡಬೇಡಿ. ಸಿಹಿ ಕುಂಬಳಕಾಯಿ ಕತ್ತರಿಸಿದಾಗ ಹೆಚ್ಚಿನವರು ಅದರ ಬೀಜ ಬಿಸಾಡುತ್ತಾರೆ. ಆದರೆ ಈ ಬೀಜ ಆರೋಗ್ಯಕರ ಮಾತ್ರವಲ್ಲ ರುಚಿಕರ ಕೂಡ ಹೌದು. ಇದನ್ನು ಒಣಗಿಸಿ ತಿನ್ನಬಹುದು. ತೂಕ ಇಳಿಕೆಗೆ ಸಹಕಾರಿ ಕುಂಬಳಕಾಯಿ ಬೀಜ ತೂಕ ಇಳಿಕೆಗೆ ಅತ್ಯುತ್ತಮವಾದ ಸ್ನ್ಯಾಕ್ಸ್ ಆಗಿದೆ. ಸಿಹಿ ಕುಂಬಳಕಾಯಿ ಬೀಜದಲ್ಲಿ ವಿಟಮಿನ್ ಬಿ, ಮೆಗ್ನಿಷ್ಯಿಯಂ, ಕಬ್ಬಿಣದಂಶ, ಪ್ರೊಟೀನ್ ಇದೆ. ಆರೋಗ್ಯಕರ ಕೊಬ್ಬಿನಂಶವಿದ್ದು ಇದು ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವಲ್ಲಿ ತುಂಬಾನೇ ಸಹಕಾರಿ.

ಸಿಹಿ ಕುಂಬಳಾಯಿ ಬೀಜ ತಿನ್ನುವುದರಿಂದ ದೇಹದಲ್ಲಿ ಸಕ್ಕರೆಯಂಶ ಕೂಡ ನಿಯಂತ್ರಣದಲ್ಲಿಡಬಹುದು, ಅಲ್ಲದೆ ಈ ಬೀಜ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ. ಸಿಹಿ ಕುಂಬಳಕಾಯಿ ಬೀಜ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಶಕ್ತಿಯನ್ನು ತುಂಬುತ್ತದೆ. ತೂಕ ಇಳಿಕೆಗೆ ನಾರಿನಂಶವಿರುವ ಆಹಾರ ಸೇವನೆ ಮಾಡಬೇಕು. ಸಿಪ್ಪೆ ಸಹಿತ ಕುಂಬಳಕಾಯಿ ಬೀಜದಲ್ಲಿ 28 ಗ್ರಾಂನಲ್ಲಿ 1.1ಗ್ರಾಂನಷ್ಟು ನಾರಿನಂಶವಿರುತ್ತದೆ. ಈ ನಾರಿನಂಶ ಜೀರ್ಣಕ್ರಿಯೆ ಚೆನ್ನಾಗಿ ನಡೆಯುವಂತೆ ಮಾಡುತ್ತದೆ. ತೂಕ ಇಳಿಕೆಯಾಗಬೇಕೆಂದರೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯ ಬೇಕಾಗಿರುವುದು ಅವಶ್ಯಕ. ಇದರಲ್ಲಿ ಸತುವಿನಂಶ ಉತ್ತಮವಾಗಿದ್ದು, ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯುತ್ತದೆ.

ಸಿಹಿ ಕುಂಬಳಕಾಯಿ ಬೀಜ ಹೇಗೆಲ್ಲಾ ಬಳಸಬಹುದು?

ಸಿಹಿ ಕುಂಬಳಕಾಯಿ ಬೀಜವನ್ನು ಸ್ನ್ಯಾಕ್ಸ್ ರೀತಿ ಬಳಸಬಹುದು, ಇದಲ್ಲದೆ ಸ್ಮೂತಿ, ಗ್ರೀಕ್ ಯೋಗರ್ಟ್, ಫ್ರೂಟ್‌ ಸಲಾಡ್‌ಗಳಲ್ಲಿ ಬಳಸಬಹುದು. ತಿನ್ನುವ ಆಹಾರ ಜೊತೆಗೆ ಇದನ್ನು ಸ್ವಲ್ಪ ಹಾಕಿ ತಿನ್ನಬಹುದು ಕೇಕ್ ಮುಂತಾದ ವಸ್ತುಗಳು ಮಾಡುವಾಗ ಬಳಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles