ಕುಕ್ಕೆ ದೇಗುಲದಲ್ಲಿ ಸಪ್ತಪದಿ, ಎರಡು ತಿಂಗಳಿಗೊಮ್ಮೆ ಸಾಮೂಹಿಕ ವಿವಾಹ

ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ಸರಳ ಸಾಮೂಹಿಕ ವಿವಾಹ ‘ಸಪ್ತಪದಿ’ ನಡೆಯಲಿದೆ. ಮಾ. 31ರಂದು, ಮೇ 21 ಹಾಗೂ ಜುಲೈ 7ರಂದು ಸಪ್ತಪದಿ ನಿಗದಿಯಾಗಿದೆ.
ಸಾಮೂಹಿಕ ವಿವಾಹವಾಗಲಿಚ್ಛಿಸುವವರು ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 7795489588 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಆಡಳಿತಾಧಿಕಾರಿ ಹಾಗೂ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಸರಳ ವಿವಾಹವಾಗುವ ವರನಿಗೆ ರೂ. 5 ಸಾವಿರ, ವಧುವಿಗೆ ರೂ. ಹತ್ತು ಸಾವಿರ ನೀಡಲಾಗುತ್ತದೆ. 55 ಸಾವಿರ ರೂ ಮೌಲ್ಯದ 8 ಗ್ರಾಂ ತೂಕದ ಚಿನ್ನದ ತಾಳಿ, 2 ಚಿನ್ನದ ಗುಂಡನ್ನು ದೇವಸ್ಥಾನದ ವತಿಯಿಂದ ನೀಡಲಾಗುವುದು.

ಕಂದಾಯ ಇಲಾಖೆ ವತಿಯಿಂದ ಆದರ್ಶ ಯೋಜನೆಯಡಿ ವಧುವಿಗೆ 10 ಸಾವಿರ ರೂಪಾಯಿಗಳ ನಿಶ್ಚಿತ ಠೇವಣಿ ಒದಗಿಸಲಾಗುತ್ತದೆ. ಪರಿಶಿಷ್ಟ ಜಾತಿಯ ಜೋಡಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸರಳ ವಿವಾಹ ಯೋಜನೆಯಡಿ 50 ಸಾವಿರ ರೂ. ಒದಗಿಸಲಾಗುತ್ತದೆ. ವಧು ವರರು, ಅವರ ಬಂಧುಗಳು ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆಯೂ ದೇಗುಲದ ವತಿಯಿಂದ ನಡೆಯಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles