ಮಳೆಗಾಲದಲ್ಲಿ ಮಾತ್ರವೇ ಸಿಗುವ ಈ ಹಣ್ಣಿನ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ….?

ಮಳೆಗಾಲದಲ್ಲಿ ಮಾತ್ರವೇ ಸಿಗುವ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡಾ ಒಂದು.
ನೇರಳೆ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಡಯಾಬಿಟೀಸ್ ಇರುವವರು ನೇರಳೆ ಹಣ್ಣುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸಿಕೊಳ್ಳಬಹುದು. ನೇರಳೆ ಹಣ್ಣಿನ ಮರದ ಚಿಗುರು ಎಲೆಗಳನ್ನು ಕಷಾಯ ಮಾಡಿಯೂ ಕುಡಿಯಬಹುದು. ಇದರಿಂದಲೂ ಡಯಾಬಿಟೀಸ್ ನಿಯಂತ್ರಣದಲ್ಲಿರಿಸಲು ಸಹಕಾರಿ.

ಇದರಲ್ಲಿ ಹೆಚ್ಚಾಗಿ ವಿಟಮಿನ್ ಸಿ, ಕಬ್ಬಿಣದಂಶ ಇರುತ್ತದೆ. ರಕ್ತದಲ್ಲಿನ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಣ್ಣು ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.
ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣುಗಳ ಸೇವನೆಯಿಂದ ಪಚನ ಕ್ರಿಯೆ ಉತ್ತಮಗೊಳ್ಳುತ್ತದೆ. ಹಲ್ಲಿನ ಆರೊಗ್ಯವನ್ನು ಕಾಪಾಡುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles