ಸತ್ಯದ ಜೊತೆ ದೈವ ಶಕ್ತಿ ಕೈ ಹಿಡಿಯುವುದು : ಶ್ರೀ ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು): ಸುಳ್ಳಿನ ಜೊತೆ ದುಷ್ಟ ಶಕ್ತಿ ಇದ್ದರೆ ಸತ್ಯದ ಜೊತೆ ದೈವ ಶಕ್ತಿ ಇರುತ್ತದೆ. ಒಂದು ಕ್ಷಣದ ಸಹನೆ ಬೆಟ್ಟದಷ್ಟು ಕಷ್ಟವನ್ನು ದೂರ ಮಾಡಬಲ್ಲದು. ಒಂದು ಕ್ಷಣದ ದುಡುಕಿನಿಂದ ಇಡೀ ಜೀವನ ನಾಶವಾಗಬಹುದೆಂಬ ಎಚ್ಚರಿಕೆಯನ್ನಿಟ್ಟುಕೊಂಡು ಮನುಷ್ಯ ಮುನ್ನಡೆಯಬೇಕೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಜುಲೈ 5 ರಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಅವರು ಸಾರ್ವಜನಿಕರ ದರ್ಶನ ಮತ್ತು ಪೂಜಾ ಕಾರ್ಯಗಳಿಗೆ ಚಾಲನೆಯಿತ್ತು ಆಶೀರ್ವಚನ ನೀಡಿದರು.
ಕರೋನಾ ಸೋಂಕು ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿ0ದ ಸಾರ್ವಜನಿಕರು ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಲು ಅವಕಾಶ ಇರಲಿಲ್ಲ. ಲಾಕ್ಡೌನ್ ತೆರವುಗೊಳಿಸಿ ಸರ್ಕಾರ ಘೋಷಿಸಿದ ಸಂದರ್ಭದಲ್ಲಿ ಶ್ರೀ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಸೋಮೇಶ್ವರ ದೇವಾಲಯ ಮೊದಲ್ಗೊಂಡು ಎಲ್ಲ ಕುಲ ದೈವಗಳಿಗೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ದರ್ಶನ ಮತ್ತು ಪೂಜೆಗೆ ಅವಕಾಶ ಕಲ್ಪಿಸಿಕೊಡಲಾಯಿತು. ಒಳ್ಳೆಯದು ಕೆಟ್ಟದ್ದು ಎರಡೂ ಮನುಷ್ಯನಲ್ಲಿ ಇವೆ. ಯಾವುದನ್ನು ಹೆಚ್ಚು ಬೆಳೆಸುತ್ತೇವೊ ಅದು ಬೆಳೆಯುತ್ತ ಹೋಗುತ್ತದೆ. ಅತಿಯಾದ ಆಲೋಚನೆಗಳು ಸಮಸ್ಯೆಗಳನ್ನು ಬಗೆಹರಿಸುವ ಬದಲು ಹೊಸ ಸಮಸ್ಯೆಗಳ ಸೃಷ್ಟಿಗೆ ಕಾರಣವಾಗುತ್ತವೆ. ಕನಸು ಭಗ್ನಗೊಂಡರೆ ಮತ್ತೊಂದು ಕನಸು ಕಾಣಬಹುದು. ಆದರೆ ಮನಸ್ಸು ಮುರಿದರೆ ಮತ್ತೊಂದು ಮನಸ್ಸು ತರುವುದಕ್ಕೆ ಆಗುವುದಿಲ್ಲ. ಸತ್ಯ ಧರ್ಮದ ತಳಹದಿಯಲ್ಲಿ ಬದುಕು ಕಟ್ಟಿಕೊಳ್ಳಬೇಕೆಂದು ಕರೆಯಿತ್ತರು.

ಇದೇ ಸಂದರ್ಭದಲ್ಲಿ ಜುಲೈ ಮಾಸದ ರಂಭಾಪುರಿ ಬೆಳಗು ಮಾಸಪತ್ರಿಕೆಯನ್ನು ಶಿವಮೊಗ್ಗ ಲೋಕೋಪಯೋಗಿ ಇಲಾಖೆ ಸೆಂಟ್ರಲ್ ಸುಪರಿಂಟೆ0ಡೆ0ಟ್ ಇಂಜನಿಯರ್ ಕೆ. ದುರಗಪ್ಪನವರು ಬಿಡುಗಡೆ ಮಾಡಿ ಮಾತನಾಡಿದರು.


ಗುರುಕುಲ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸೇರಬಯಸುವ ವೀರಶೈವ ಜಂಗಮ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ವೈದಿಕ, ಸಂಸ್ಕೃತ, ಜ್ಯೋತಿಷ್ಯ ಮತ್ತು ಯೋಗ ಶಿಕ್ಷಣ ನುರಿತ ಶಿಕ್ಷಕರಿಂದ ತರಬೇತಿ ಕೊಡಲಾಗುವುದು. ಜುಲೈ 20ರ ಒಳಗಾಗಿ ಶ್ರೀ ಪೀಠದ ಕಾರ್ಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449739359, 9620744394 ನ್ನು ಸಂಪರ್ಕಿಸಬಹುದು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Related Articles

ಪ್ರತಿಕ್ರಿಯೆ ನೀಡಿ

Latest Articles