ನಾಳೆ ನಾಗರಪಂಚಮಿ ಹಬ್ಬ, ಮನೆಯಲ್ಲೇ ಮಾಡಿ ವಿಶೇಷ ತಿನಿಸು

ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ನಾಗದೇವತೆಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಗ್ರಾಮದ ಪ್ರತಿ ಮನೆಯಲ್ಲಿಯೂ ನಾಗ ದೇವರ ಸಾನ್ನಿಧ್ಯವಿರುವ ನಾಗಬನಗಳಲ್ಲಿ ಹಾಲೆರೆಯುವ ಮೂಲಕ ವಿಶೇಷವಾಗಿ ಆಚರಿಸುತ್ತಾರೆ.
ಈ ಹಬ್ಬಕ್ಕೆ ಸ್ಪೆಷಲ್ ಎಂಬ0ತೆ ಹುರಿದ ಅಕ್ಕಿಯಿಂದ ತಂಬಿಟ್ಟು ಮಾಡುತ್ತಾರೆ. ಜತೆಗೆ ಅರಶಿನ ಎಲೆಯಲ್ಲಿ ಮಾಡಿದ ಅರಸಿದನ ಸಿಹಿಯನ್ನು ಕೂಡಾ ಮಾಡಿ ದೇವರಿಗೆ ನೈವೇದ್ಯವಾಗಿಸುತ್ತಾರೆ.


ಹುರಿದ ಅಕ್ಕಿ ತಂಬಿಟ್ಟು
ಬೇಕಾಗುವ ಸಾಮಗ್ರಿ:
ಅಕ್ಕಿ (ಕೆಂಪಕ್ಕಿ ಆಗಿದ್ದರೆ ರುಚಿ ಜಾಸ್ತಿ), -ಒಂದು ಕಪ್, ಬೆಲ್ಲ ಅರ್ಧ ಕಪ್, ಏಲಕ್ಕಿ ಪುಡಿ -ಅರ್ಧ ಚಮಚ, ತುರಿದ ತೆಂಗಿನಕಾಯಿ ಒಂದು ಕಪ್, ತುಪ್ಪ- 4 ಚಮಚ.

ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ಕೆಂಪಗೆ ಹುರಿದುಕೊಳ್ಳಬೇಕು. ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಅದನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲವನ್ನು ಪುಡಿ ಮಾಡಿ ಸೇರಿಸಿ, ನಂತರ ಅದಕ್ಕೆ ತುರಿದ ತೆಂಗಿನಕಾಯಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಅದನ್ನು ಕೈಗೆ ತುಪ್ಪ ಸವರಿಕೊಂಡು ಉಂಡೆ ಮಾಡಿದರಾಯಿತು. ಅದಕ್ಕೆ ಒಣದ್ರಾಕ್ಷಿ, ಗೋಡಂಬಿ ಚೂರುಗಳನ್ನು ಸೇರಿಸಿ ಉಂಡೆ ಮಾಡಬಹುದು.

ಅರಸಿನ ಎಲೆ ಕಡುಬು


ಬೇಕಾಗುವ ಸಾಮಗ್ರಿ: ದೋಸೆ ಅಕ್ಕಿ-ಒಂದು ಕಪ್, ಅರಸಿನ ಎಲೆ 20, ಪುಡಿಮಾಡಿದ ಬೆಲ್ಲ 2 ಕಪ್, ತುರಿದ ತೆಂಗಿನಕಾಯಿ, ಉಪ್ಪು ರುಚಿಗೆ.
ಮಾಡುವ ವಿಧಾನ: ಅರಸಿನ ಎಲೆಯನ್ನು ತೊಳೆದು ನೀರು ಒರೆಸಿಟ್ಟುಕೊಳ್ಳಿ. ದೋಸೆಅಕ್ಕಿ ಒಂದು ಗಂಟೆಗಳ ಕಾಲ ನೆನೆ ಹಾಕಬೇಕು. ನೆನೆಸಿದ ದೋಸೆ ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ದೋಸೆ ಹಿಟ್ಟಿನ ಹದಕ್ಕಿರಲಿ. ತೆಂಗಿನ ಕಾಯಿ, ಬೆಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಟ್ಟುಕೊಳ್ಳಿ. ನಂತರ ಅರಸಿನ ಎಲೆಯ ಮೇಲೆ ಒಂದು ಸೌಟಿನಷ್ಟು ಹಿಟ್ಟನ್ನು ಹಾಕಿ ಸವರಿ. ಅದರ ಮೇಲೆ ತೆಂಗಿನಕಾಯಿ ಬೆಲ್ಲದ ಹೂರಣವನ್ನು ಹರಡಿ. ಅರಸಿನ ಎಲೆಯನ್ನು ಮಡಚಿ, ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ20 ನಿಮಿಷಗಳ ಕಾಲ ಬೇಯಿಸಿ. ಬಿಸಿ ಬಿಸಿ ಅರಸಿನ ಎಲೆ ಕಡುಬನ್ನು ತುಪ್ಪದೊಂದಿಗೆ ಸವಿಯಿರಿ.

Related Articles

ಪ್ರತಿಕ್ರಿಯೆ ನೀಡಿ

Latest Articles