ಮಳೆಗಾಲದಲ್ಲಿ ಕುಂಡಗಳಲ್ಲಿನ ಗಿಡಗಳನ್ನುಈ ರೀತಿ ಆರೈಕೆ ಮಾಡಿ

ಮಳೆಗಾಲದಲ್ಲಿ ಪ್ರಕೃತಿ ಹಸಿರಿನಿಂದ ಬಹಳ ಸುಂದರವಾಗಿ ನಳನಳಿಸುತ್ತಿರುತ್ತದೆ. ಮಳೆ ನೀರು ಗಿಡಗಳಿಗೆ ಹೊಸ ಕಳೆಯನ್ನು ನೀಡುತ್ತದೆ. ಸ್ವಾಭಾವಿಕವಾಗಿ ಮಳೆ ನೀರಿಗೆ ತೋಯ್ದ ಗಿಡಗಳು ತನ್ನಿಂತಾನೇ ಚಿಗುರಿಕೊಳ್ಳುತ್ತವೆ. ಇಳೆಗೆ ಹೊಸ ಹಸಿರಿನ ಕಳೆಯನ್ನು ತರುತ್ತವೆ.


ಮಳೆಗಾಲದಲ್ಲಿ ಹಳೆ ಗಿಡಗಳನ್ನು ಕಿತ್ತು ಹೊಸ ಗಿಡಗಳನ್ನು ತಂದು ಬೆಳೆಸುವ ಸಂಭ್ರಮ ಗಾರ್ಡನ್ ಪ್ರಿಯರಿಗೆ.


ಕೆಲವೊಂದು ಅಲಂಕಾರಿಕ ಗಿಡಗಳು ಅಥವಾ ಹೂವಿನ ಗಿಡಗಳಿಗೆ ಹೆಚ್ಚು ನೀರು ಬೇಕಾಗಿರುವುದಿಲ್ಲ. ಆದರೆ ಮಳೆಗಾಲದಲ್ಲಿ ಮಳೆ ಸುರಿಯುವುದರಿಂದ ನೀರು ಜಾಸ್ತಿ ಆಗಿ ಗಿಡ ಕೊಳೆತುಹೋಗಬಹುದು.
ಹಾಗಾಗಿ ಹೂವಿನ ಕುಂಡದಲ್ಲಿ ಬೆಳೆಸಿರುವ ಗಿಡಗಳಿಗೆ ನೇರವಾಗಿ ಮಳೆ ನೀರು ಬೀಳುವಂತಿರಬಾರದು. ಮಳೆ ನೀರು ಬೀಳುವ ಸ್ಥಳದಿಂದ ಸ್ಥಳಾಂತರಿಸಬೇಕು.
ಕುಂಡದಲ್ಲಿ ನೀರು ಸರಾಗವಾಗಿ ಹರಿದುಹೋಗದಿದ್ದರೆ ಮಳೆಗಾಲದಲ್ಲಿ ಕುಂಡದಲ್ಲಿ ಪಾಚಿ ಕಟ್ಟಿಕೊಳ್ಳುತ್ತಿರುತ್ತದೆ. ಹೂಕುಂಡದ ಮೇಲ್ಭಾಗದಲ್ಲಿರುವ ಮಣ್ಣನ್ನು ಸಡಿಲಗೊಳಿಸಬೇಕು, ಇಲ್ಲವೇ ಸ್ವಲ್ಪ ಮಣ್ಣನ್ನು ತೆಗೆದು ಹೊಸ ಮಣ್ಣನ್ನು ಹಾಕಬೇಕು.

  • ಮಳೆಗಾಲದಲ್ಲಿ ಗಿಡಗಳು ಕೀಟಗಳು, ಹುಳುಗಳನ್ನು ಆಕರ್ಷಿಸುತ್ತದೆ. ಎರೆಹುಳುಗಳು ಕಂಡುಬ0ದರೆ ಅವುಗಳನ್ನು ಹಾಗೇ ಬಿಡಿ. ಅವುಗಳು ಮಣ್ಣು ಸಡಿಲ ಮಾಡುತ್ತವೆ.
  • ಗೊಬ್ಬರ ನೀಡಿ: ಮಳೆ ನೀರಿನಿಂದಾಗಿ ಕುಂಡದಲ್ಲಿರುವ ಮಣ್ಣಿನ ಫಲವತ್ತತೆ ಕಡಿಮೆ ಆಗಬಹುದು. ಹಾಗಾಗಿ ಕಾಲಕಾಲಕ್ಕೆ ಗೊಬ್ಬರ ನೀಡಬೇಕು.
  • ಮಳೆಗಾಲದಲ್ಲಿ ನೀರು ಹೆಚ್ಚಾಗಿ ಗಿಡಗಳ ಬೇರು ಕೊಳೆತು ಹೋಗುವ ಸಾಧ್ಯತೆ ಇರುತ್ತದೆ. ಬೇಸಿಗೆಗಿಂತ ಮಳೆಗಾಲದಲ್ಲಿ ಕುಂಡದಲ್ಲಿರುವ ಗಿಡಗಳಿಗೆ ಕಡಿಮೆ ನೀರು ಸಾಕಾಗುತ್ತದೆ. ಕುಂಡದಲ್ಲಿರುವ ಮಣ್ಣು ಒಣಗಿದಂತೆ ಕಂಡರೆ ಅಥವಾ ಗಿಡಗಳ ಎಲೆಗಳು ಉದುರಿದರೆ ನೀರುಣಿಸಬೇಕು.

Related Articles

ಪ್ರತಿಕ್ರಿಯೆ ನೀಡಿ

Latest Articles