ದೇವರಿಲ್ಲದೆ ಜೀವನಿಲ್ಲ ಎಂದು ಸಾರಿದ ಶ್ರೀ ಅಕ್ಷೋಭ್ಯತೀರ್ಥರು

ಮಧ್ವಾಚಾರ‍್ಯರ ನೇರ ಅನುಯಾಯಿಗಳಾಗಿ ಮಾಧ್ವ ಪೀಠದ ಅಲಂಕಾರ ಮಾಡಿದ ಕೊನೆಯ ಆಚಾರ‍್ಯರು ಅಕ್ಷೋಭ್ಯತೀರ್ಥರು. ವ್ಯಾಸತೀರ್ಥರು ರಚಿಸಿರುವ ‘ಜಯತೀರ್ಥವಿಜಯ’ ಕೃತಿಯಲ್ಲಿ ಅಕ್ಷೋಭ್ಯತೀರ್ಥರ ಲೀಲೆಗಳ ಕುರಿತು ವರ್ಣಿಸಲಾಗಿದೆ.

*ಡಾ. ಗುರುರಾಜ ಪೋಶೆಟ್ಟಿಹಳ್ಳಿ

ಶ್ರೀಮದಾನಂದ ತೀರ್ಥರ ನಾಲ್ಕನೇ ಶಿಷ್ಯರು. ಶ್ರೀ ಮದಾಚಾರ್ಯರ ಜೀವಮಾನದಲ್ಲಿ ಅವರ ಜೊತೆಗಿದ್ದ ಪ್ರಮುಖ ಶಿಷ್ಯರಾದ ಶ್ರೀಪದ್ಮನಾಭ ತೀರ್ಥರು, ಶ್ರೀನರಹರಿತೀರ್ಥರು, ಶ್ರೀಮಾಧವತೀರ್ಥರು, ಶ್ರೀ ಅಕ್ಷೋಭ್ಯ ತೀರ್ಥರು. ಈ ಎಲ್ಲಾ ಮಹಾನುಭಾವರು ಒಂದೊ0ದು ರೀತಿಯಿಂದ ಶ್ರೀಹರಿವಾಯು ಗುರುಗಳ ಸೇವೆಗೈದಿದ್ದಾರೆ. ಈ ನಾಲ್ಕು ಜನ ಯತಿಪುಂಗವರು ಮಧ್ವಮತವು ಅಚಂದ್ರಾರ್ಕವಾಗಿ ಕಂಗೊಳಿಸುವoತೆ ಭದ್ರವಾದ ತಳಹದಿಯನ್ನು ಹಾಕಿರುವರು. ಪ್ರಕೃತದಲ್ಲಿ ಈ ನಾಲ್ವರ ಪೈಕಿ ಶ್ರೀ ಅಕ್ಷೋಭ್ಯತೀರ್ಥರು ಮಧ್ವಮತಕ್ಕೆ ಮಾಡಿದ ಅಪರಿಮಿತ ಉಪಕಾರವನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಮಧ್ವಾಚಾರ‍್ಯರ ನೇರ ಅನುಯಾಯಿಗಳಾಗಿ ಮಾಧ್ವ ಪೀಠದ ಅಲಂಕಾರ ಮಾಡಿದ ಕೊನೆಯ ಆಚಾರ‍್ಯರು ಅಕ್ಷೋಭ್ಯತೀರ್ಥರು. ವ್ಯಾಸತೀರ್ಥರು ರಚಿಸಿರುವ ‘ಜಯತೀರ್ಥವಿಜಯ’ ಕೃತಿಯಲ್ಲಿ ಅಕ್ಷೋಭ್ಯತೀರ್ಥರ ಲೀಲೆಗಳ ಕುರಿತು ವರ್ಣಿಸಲಾಗಿದೆ.

ಅಕ್ಷೋಭ್ಯತೀರ್ಥರ ಪೂರ್ವಾಶ್ರಮದ ಹೆಸರು ಗೋವಿಂದ ಭಟ್ಟ. ಮಧ್ವಾಚಾರ್ಯರ ಉಪದೇಶಗಳಿಂದ ಪ್ರಭಾವಿತರಾಗಿ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಅಕ್ಷೋಭ್ಯ ತೀರ್ಥರಾದರು. ಇವರು 15 ವರ್ಷಗಳ ಕಾಲ ಶ್ರೀಮಧ್ವಾಚಾರ್ಯರ ಸಂಸ್ಥಾನವನ್ನು ಆಳಿದರು. ಈ ಅವಧಿಯಲ್ಲಿ ಇವರು ನಮ್ಮ ಸಮಾಜಕ್ಕೆ ಅತೀ ಮುಖ್ಯವಾದ ಎರಡು ಮಹಾಕಾರ್ಯಗಳನ್ನು ಸಾಧಿಸಿರುವರು. ಶ್ರೀ ಅಕ್ಷೋಭ್ಯ ತೀರ್ಥರು ತಮ್ಮ ಶಿಷ್ಯರಾದ ಜಯತೀರ್ಥರಿಗೆ ಸಕಲ ವೇದಾಂತ ಗ್ರಂಥಗಳ ಪಾಠವನ್ನು ಹೇಳಿದರು.

ಮುಳಬಾಗಿಲಿನಲ್ಲಿ ಅಕ್ಷೋಭ್ಯತೀರ್ಥರು ಮತ್ತು ಆ ಕಾಲದಲ್ಲಿ ಮಾಯಾವಾದವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಹೆಸರಾಂತ ಆಚಾರ‍್ಯರಾದ ವಿಜಯನಗರ ಸಾಮ್ರಾಜ್ಯದ ಶ್ರೀ ವಿದ್ಯಾರಣ್ಯರೊಡನೆ ನಡುವೆ ದ್ವೈತ  ಮತ್ತು ಅದ್ವೈತ  ಸಿದ್ಧಾಂತ ಕುರಿತಂತೆ ಮುಖಾಮುಖಿ ಚರ್ಚೆ ನಡೆಯಿತು. ಆ ಸುದೀರ್ಘ, ಐತಿಹಾಸಿಕ ಚರ್ಚೆಯಲ್ಲಿ ವಿದ್ಯಾರಣ್ಯರನ್ನು ಅಕ್ಷೋಭ್ಯರು ಸೋಲಿಸಿದರು. ದೇವೋತ್ತಮ ಪರಮ ಪುರುಷ ಶ್ರೀ ಹರಿಯೇ ಈ ಜಗದ ಪರಮ, ನಿತ್ಯ ಸತ್ಯ, ಉಳಿದೆಲ್ಲಾ ಜೀವಿಗಳು ಆತನ ಸೇವಕರು ಎಂಬುದನ್ನು ಅಕ್ಷೋಭ್ಯರು ಸಂಶಯಕ್ಕೆಣೆಯಿಲ್ಲದ0ತೆ ನಿರೂಪಿಸಿದರು. ಮಧ್ವಾಚಾರ‍್ಯರ ಸಿದ್ಧಾಂತ ಪ್ರಚಾರದಲ್ಲಿ ಅಕ್ಷೋಭ್ಯರ ಈ ಗೆಲುವು ಒಂದು ಮಹತ್ವ ತಿರುವು ಎಂದೇ ಭಾವಿಸಲಾಗಿದೆ. 

ತತ್ವಮಸಿ ಪದದ ಅರ್ಥವನ್ನು ಜೀವ ಮತ್ತು ಬ್ರಹ್ಮನ ಪ್ರತ್ಯೇಕತೆಯ ಉಪಮೆಯೊಂದಿಗೆ ಹೋಲಿಸಿದರು. ವ್ಯಾಕರಣದ ರೀತ್ಯ ತೆಗೆದುಕೊಂಡಾಗ, ಜೀವ ಎನ್ನುವುದು ದೇವರ ಸೇವಕ. ದೇವರಿಲ್ಲದೆ ಜೀವನಿಲ್ಲ ಎಂಬ ವಾದವನ್ನು ಮಂಡಿಸಿದರು. ಅಕ್ಷೋಭ್ಯತೀರ್ಥರ ವಾದಕ್ಕೆ ಎದುರಾಡಲು ವಿದ್ಯಾರಣ್ಯರ ಬಳಿ ಮಾತುಗಳೇ ಇರಲಿಲ್ಲ. ಅವರನ್ನು ಸೋಲಿಸಿ ಜಯಭೇರಿ ಬಾರಿಸಿ, ಶ್ರೀ ಮಧ್ವಾಚಾರ್ಯರ ಮತವನ್ನು ಹೆಚ್ಚು ಹೆಚ್ಚಾಗಿ ಪ್ರಚಾರ ಮಾಡಿದರು. ಆ ಸಂದರ್ಭದಲ್ಲಿ ಇಡೀ-ಪ್ರತಿವಾದಕ್ಕೆ ಸಾಕ್ಷಿಯಾಗಿದ್ದ ವಿದ್ವಾಂಸರೊಬ್ಬರು ‘ಆಸೀನಾ ತತ್ತ್ವಮಸೀನಾ ಪರಜೀವ ಪ್ರಭೋದಿನಾ| ವಿದುಯಾರಣ್ಯಂ ಮಹಾರಣ್ಯಂ ಅಕ್ಷೋಭ್ಯ ಮುನಿರಾಚ್ಛೆನಮ್|’ ಎಂದು ಒಕ್ಕಣಿಸಿದರು. ಅಂದರೆ, ಅಕ್ಷೋಭ್ಯತೀರ್ಥರು ವಿದ್ಯಾರಣ್ಯರೆಂಬ ಕಾಡನ್ನು ತತ್ತ್ವಮಸಿ ಎಂಬ ಆಯುಧದಿಂದ ನೆಲಸಮ ಮಾಡಿದರು. ಅದರೊಂದಿಗೆ ಜೀವ ಮತ್ತು ಬ್ರಹ್ಮನ ನಡುವಿನ ಸಂಬ0ಧವನ್ನು ವಿಸ್ತೃತವಾಗಿ ವಿವರಿಸಿದರು. ಮಧ್ವ ಸಿದ್ಧಾಂತದ ಗೆಲುವಿನ ಸಂಕೇತವಾದ ಈ ವಾದದ ಸ್ಮರಣಿಗೆಂದೇ ಮುಳುಬಾಗಿಲಿನಲ್ಲ್ಲಯೇ ಹಂಚುಕಲ್ಲು ಬೆಟ್ಟದ ಶಿರೋಭಾಗದಲ್ಲಿ ವಿಜಯಸೂಚಕವಾದ ಶಿಲಾಸ್ತಂಭವನ್ನು ಪ್ರತಿಷ್ಠಾಪಿಸಿ ಅದರ ಮೇಲೆ, ಅದರ ಹತ್ತಿರದ ಗುಡ್ಡದ ಮೇಲೂ ಸಂಸ್ಕೃತ, ಕನ್ನಡ ಮತ್ತು ತಮಿಳು ಅಕ್ಷರಗಳಲ್ಲಿ, ಶ್ಲೋಕವನ್ನು ಕೆತ್ತಿಸಿ ಅವರು ಚಿರಸ್ಮರಣಿಯರಾಗಿ ಕೆಲಸ ಮಾಡಿದ್ದಾರೆ. ಇದನ್ನು ಇಂದಿಗೂ ನೋಡಬಹುದು.ಈ ಅಂಶವನ್ನು ಟೀಕಾಕೃತಪಾದರು ತಮ್ಮ ತತ್ತ್ವ ಪ್ರಕಾಶಿಕಾ ಗ್ರಂಥದ ಮಂಗಳಚರಣ ಶ್ಲೋಕದಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಕೂಡ್ಲಿ ಗ್ರಾಮದಲ್ಲಿ ವಿದ್ಯಾರಣ್ಯ ಮಠವಿದ್ದ ಸ್ಥಳದಲ್ಲೇ ತಮ್ಮದೇ ಆದ ಒಂದು ಮಠವನ್ನು ಸ್ಥಾಪಿಸಿ “ತ್ರೆöÊಲೋಕ್ಯ ಭೂಷಣತೀರ್ಥರು” ಎಂಬುವವರಿಗೆ ಆಶ್ರಮ ಕೊಟ್ಟು ಮಧ್ವತತ್ವವನ್ನು ಪ್ರಚಾರ ಮಾಡಲು ಯೋಜಿಸಿದರು. ಅದರಂತೆ ತೀರ್ಥಹಳ್ಳಿ ತಾಲೂಕಿನ ದೂರ್ವಾಸಪುರದಲ್ಲಿ ಇದ್ದ ಅದ್ವೈತ ಮಠಕ್ಕೆ ಪ್ರತಿಯಾಗಿ ತುಂಗಾತೀರದಲಿ ಬಾಣಕರ (ಬಾಳಿಗಾರ) ಎಂಬಲ್ಲಿಯೂ ಒಂದು ಸ್ವತಂತ್ರ ಮಠವನ್ನು ಸ್ಥಾಪಿಸಿ ಲೋಕಪೂಜ್ಯರು ಎಂಬುವವರಿಗೆ ಆಶ್ರಮ ಕೊಟ್ಟು ತತ್ತ್ವಪ್ರಚಾರ ಮಾಡಿದರು.

ಮಧ್ವಾಚಾರ‍್ಯರ ಬೋಧನೆಗಳನ್ನು ನಾಡಿನ ಮೂಲೆ ಮೂಲೆಗೂ ತಲುಪಿಸಲೇಂದೇ ಅಕ್ಷೋಭ್ಯತೀರ್ಥರು ತಮ್ಮ ಶಿಷ್ಯ ಜಯತೀರ್ಥರಿಗೆ ವಿಶೇಷ ತರಬೇತಿ ನೀಡಿದರು. ಅಕ್ಷೋಭ್ಯರ ಆದೇಶದಂತೆ ಮಧ್ವಾಚಾರ‍್ಯರ ಕೃತಿಗಳ ಮೇಲೆ ವ್ಯಾಖ್ಯಾನಗಳನ್ನು ಬರೆದ ಜಯತೀರ್ಥರು ಹರಿಪ್ರಜ್ಞೆ ಪ್ರಚಾರ ಮಾಡಿದರು.

ಕೃತಿಗಳು: ಮಧ್ವಾಚಾರ‍್ಯರ ಬೋಧನೆಗಳನ್ನೊಳಗೊಂಡ ‘ಮಾಧ್ವ ತತ್ವಸಾರ ಸಂಗ್ರಹ’ ಎಂಬ ಕೃತಿಯನ್ನು ಅಕ್ಷೋಭ್ಯರು ರಚಿಸಿದ್ದಾರೆ. ಆದರೆ ಈಗ ಈ ಕೃತಿ ಲಭ್ಯವಿಲ್ಲ. ಇದಲ್ಲದೇ ವೇದಗಳ ಮುಖ್ಯಾಂಶಗಳನ್ನೊಳಗೊ0ಡ ‘ವೇದ ಸಾರ ಸಂಗ್ರಹ’ ಎಂಬ ಕೃತಿಯನ್ನೂ ಇವರು ರಚಿಸಿದ್ದಾರೆ.

ಇವರು 15 ವರ್ಷ ಶ್ರೀ ಮೂಲ ಸೀತಾ ರಾಮರನ್ನು ಪೂಜಿಸಿ1353ರಲ್ಲಿ ಶ್ರೀ ಟೀಕಾರಾಯರಿಗೆ (ಶ್ರೀಜಯತೀರ್ಥರಿಗೆ) ಸಂಸ್ಥಾನವನ್ನು ಕೊಟ್ಟು 1367ನೇ ವಿಶ್ವಾವಸುನಾಮ ಸಂವತ್ಸರದ ಮಾರ್ಗಶೀರ್ಷ ಕೃಷ್ಣ ಪಂಚಮೀ ದಿನ ವೃಂದಾವನಸ್ಥರಾದರು. ಇವರ ವೃಂದಾವನವು ಕಾಗಿನಿ ನದಿಯ ದಂಡೆಯ ಮೇಲೆ ಮಳಖೇಡ ಗ್ರಾಮದಲ್ಲಿದೆ.

ಯೋ ವಿದ್ಯಾರಣ್ಯವಿಪಿನಂ ತತ್ತ್ವಮಸ್ಯಾಸಿನಾಚ್ಛೆನತ್|
ಶ್ರೀಮದೋಕ್ಷೋಭ್ಯ ತೀರ್ಥಾಯ ನಮಸ್ತಸ್ತೆ ಮಹಾತ್ಮನೇ||

Related Articles

ಪ್ರತಿಕ್ರಿಯೆ ನೀಡಿ

Latest Articles