ಜಗನ್ನಾಥ ದೇವಾಲಯವಿದು

ಶ್ರೀಕೃಷ್ಣನ ಮತ್ತೊಂದು ಹೆಸರು ಜಗನ್ನಾಥ, ಜಗಕ್ಕೇ ಒಡೆಯನವನು. ಶ್ರೀಕೃಷ್ಣನ ಬೇರೆ ಬೇರೆ ಹೆಸರಿನಲ್ಲಿ ನೂರಾರು ದೇವಸ್ಥಾನಗಳು ನಿರ್ಮಾಣಗೊಂಡಿವೆ. ಶ್ರೀಕೃಷ್ಣನಿಗೆ ದೇವಾಲಯಗಳನ್ನು ನಿರ್ಮಿಸಿ ಅಲ್ಲಲ್ಲಿ ಆರಾಸುತ್ತಾರೆ. ಅದರಲ್ಲೂ ಉತ್ತರಭಾರತದಲ್ಲಿ ಶ್ರೀಕೃಷ್ಣನ ಹಲವಾರು ದೇವಾಲಯಗಳನ್ನು ನೋಡಬಹುದು. ನಮ್ಮ ರಾಜ್ಯದ ನೆರೆಯ ನಗರ ಹೈದ್ರಾಬಾದ್‍ನಲ್ಲಿ ಹಲವಾರು ತೀರ್ಥಕ್ಷೇತ್ರಗಳಿವೆ. ವಿಶೇಷವಾಗಿ ಪುರಿ ಜಗನ್ನಾಥ ದೇವಾಲಯವನ್ನೇ ಹೋಲುವ ಜಗನ್ನಾಥ ದೇವಸ್ಥಾನ ಹೈದ್ರಾಬಾದ್‍ನ ಪ್ರಮುಖ ಯಾತ್ರಾಸ್ಥಳಗಳಲ್ಲೊಂದು.
ಪುರಿ ಜಗನ್ನಾಥ ದೇವಸ್ಥಾನವನ್ನೇ ಹೋಲುವ ಈ ದೇವಸ್ಥಾನವನ್ನು ಒಡಿಯಾ ಸಮುದಾಯದವರು ಜಗನ್ನಾಥನನಿಗಾಗಿ ನಿರ್ಮಾಣ ಮಾಡಿಸಿದ್ದಾರೆ. ಬಂಜಾರಾ ಬೆಟ್ಟದ ಸಮೀಪದಲ್ಲಿಯೇ ಇರುವ ಈ ದೇವಸ್ಥಾನದಲ್ಲಿ ವರ್ಷಕ್ಕೊಮ್ಮೆ ನಡೆಯುವ ರಥಯಾತ್ರೆಯಲ್ಲಿ ಸಾವಿರಾರು ಮಂದಿ ಭಾಗವಹಿಸುತ್ತಾರೆ. ಈ ದೇವಸ್ಥಾನ 2009ರಲ್ಲಿ ನಿರ್ಮಾಣಗೊಂಡಿದ್ದು, ಈ ಪವಿತ್ರ ಸ್ಥಳ ಭಕ್ತರನ್ನು ಮಾತ್ರವಲ್ಲ, ಕಲಾರಸಿಕರನ್ನು, ಕಲಾಸಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ಇದು ವಿನ್ಯಾಸದಲ್ಲಿ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಸ್ಥಾನವನ್ನೇ ಹೋಲುತ್ತದೆ. 70 ಅಡಿ ಎತ್ತರದ ಗೋಪುರವನ್ನು ಹೊಂದಿದ್ದು, ವಿವಿಧ ಕೆತ್ತನೆಗಳಿಂದ ಅಲಂಕೃತಗೊಂಡು ಆಕರ್ಷಕವಾಗಿದೆ. ಮರಳು ಮಿಶ್ರಿತ ಕೆಂಪು ಬಣ್ಣದ ಕಲ್ಲುಗಳಿಂದ ನಿರ್ಮಾಣಗೊಂಡಿರುವ ಈ ದೇವಸ್ಥಾನದ ನಿರ್ಮಾಣಕ್ಕೆ 600 ಟನ್ ಕಲ್ಲುಗಳನ್ನು ಬಳಸಲಾಗಿದೆ.
ಶ್ರೀಕೃಷ್ಣ ದೇವರಿಗೆ ಅರ್ಪಿತವಾಗಿರುವ ಈ ದೇವಾಲಯದಲ್ಲಿ ಇತರೆ ಐದು ಸಣ್ಣ ದೇಗುಲಗಳಿವೆ. ಗಣೇಶ, ಶಿವ, ಪಾರ್ವತಿಯ ಅವತಾರ ಬಿಮಲ, ಲಕ್ಷ್ಮೀ ಹಾಗೂ ಹನುಮ ದೇವರ ಗುಡಿಗಳನ್ನು ಕಾಣಬಹುದು. ಅಲ್ಲದೇ ನವಗ್ರಹ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನಕ್ಕೆ ಮೂರು ದ್ವಾರಗಳಿದ್ದು ಒಳಗೆ ಪ್ರವೇಶ ಪಡೆಯುವುದು ಸುಲಭ.

ಖಜುರಾಹೋ ದೇವಸ್ಥಾನದಲ್ಲಿ ಕಂಡು ಬರುವು ಕೆತ್ತನೆಗಳಂತೆ, ವ್ಯಕ್ತಿಯ ಭಾವನೆಗಳನ್ನು ಪ್ರತಿನಿಸುವ ಹಲವಾರು ಕೆತ್ತನೆಗಳನ್ನು ಕೂಡಾ ಇಲ್ಲಿ ಕಾಣಬಹುದು. ದೇವಾಲಯದ ಗರ್ಭಗುಡಿಯಲ್ಲಿ ಜಗನ್ನಾಥ ದೇವರು ಹಾಗೂ ಬಾಲಭದ್ರ, ಸುಭದ್ರಾ ದೇವಿಯ ಮೂರ್ತಿಗಳನ್ನು ಕಾಣಬಹುದು.

ಹತ್ತಿರದ ಆಕರ್ಷಣೆ

ಶ್ಯಾಮ ದೇವಸ್ಥಾನ
ಶ್ರೀಕೃಷ್ಣ ದೇವರಿಗೆ ಅರ್ಪಿತವಾಗಿರುವ ಶ್ಯಾಮ ಬಾಬಾ ದೇವಸ್ಥಾನ ಪ್ರತಿವರ್ಷ ಸಾವಿರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಈ ದೇವಸ್ಥಾನದ ಪ್ರಮುಖ ಅಕರ್ಷಣೆ ಅಂದರೆ ರಾತ್ರಿಯಿಡೀ ಇಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿರುತ್ತದೆ.

ಚೆನ್ನ ಕೇಶವ ಸ್ವಾಮಿ ದೇವಸ್ಥಾನ: ಪ್ರಾಚೀನ ದೇವಸ್ಥಾನಗಳಲ್ಲಿ ಇದೂ ಒಂದು. ಕೇಶವಗಿರಿಯ ಬೆಟ್ಟದ ಮೇಲಿರುವ ಈ ದೇವಸ್ಥಾನ ಸರ್ಕಾರದ ಅೀನಕ್ಕೊಳಪಟ್ಟಿದೆ.

ರುದ್ರನಾಥ ಸ್ವಾಮಿ ದೇವಸ್ಥಾನ: ಜಿಯಗುಡಲ್ಲಿರುವ ಈ ದೇವಸ್ಥಾನ 400 ವರ್ಷಗಳಷ್ಟು ಹಳೆಯದಾಗಿದೆ.

ಅಷ್ಟಲಕ್ಷ್ಮೀ ದೇವಸ್ಥಾನ: ಇಲ್ಲಿರುವ ದೇವಸ್ಥಾನದಲ್ಲಿ ಸುಂದರವಾದ ಲಕ್ಷ್ಮೀ ದೇವಿಯ ಮೂರ್ತಿಗಳಿವೆ. ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ಕಂಡುಬರುವಂತೆ ಇಲ್ಲಿ ವಾಸ್ತುಶಿಲ್ಪ ಶೈಲಿಯನ್ನು ನೋಡಬಹುದು. ಈ ದೇವಸ್ಥಾನದಲ್ಲಿ ಆಗಾಗ್ಗೆ ಹಲವಾರು ಮಾರ್ಪಾಡುಗಳನ್ನು ಮಾಡಲಾಗಿದೆ. ಇಲ್ಲಿರುವ ಗೋಪುರದಲ್ಲಿ 134 ವಿಗ್ರಹಗಳು ಕೆತ್ತಲ್ಪಟ್ಟಿವೆ. ಆದಿಲಕ್ಷ್ಮೀ, ಐಶ್ವರ್ಯಲಕ್ಷ್ಮೀ, ಧಾನ್ಯಲಕ್ಷ್ಮೀ, ಗಜಲಕ್ಷ್ಮೀ, ವಿಜಯಲಕ್ಷ್ಮೀ, ಸಂತಾನಲಕ್ಷ್ಮೀ, ವರಲಕ್ಷ್ಮೀ, ಧನಲಕ್ಷ್ಮೀಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಗಳನ್ನು ಬಂಗಾರದ ನೆಕ್ಲೇಸ್‍ಗಳಿಂದ ಅಲಂಕಾರ ಮಾಡಲಾಗಿದೆ, ಶೋಭಾಯಮಾನವಾಗಿದೆ.
ಹೈದ್ರಾಬಾದ್‍ನ ನಂಪಲ್ಲಿಯಿಂದ 12 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನ ದೇಶದಲ್ಲಿರುವ ಎರಡೇ ಎರಡು ಅಷ್ಟಲಕ್ಮ್ಷೀ ದೇವಸ್ಥಾನಗಳಲ್ಲಿ ಒಂದು. ಮತ್ತೊಂದು ಚೆನ್ನೈನಲ್ಲಿದೆ.
ಶ್ರೀಲಕ್ಷ್ಮೀಯ ಎಂಟು ಅವತಾರಗಳನ್ನು ಇಲ್ಲಿ ನೋಡಬಹುದು. ಲಕ್ಷ್ಮೀಯರ ಮೂರ್ತಿಗಳನ್ನು ಮರಳು ಹಾಗೂ ಸಿಮೆಂಟ್‍ನಿಂದ ರೂಪಿಸಲಾಗಿದೆ. ಈ ಅಷ್ಟಲಕ್ಷ್ಮೀಯರನ್ನು ಕಂಚಿ ಕಾಮಕೋಟಿ ಪೀಠಸ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿ ಅವರು 1996ರಲ್ಲಿ ಪ್ರತಿಷ್ಠಾಪಿಸಿದ್ದಾರೆ.

ಶ್ರೀದೇವಿ ಅಂಬೆಕಲ್ಲು
ಶ್ರೀದೇವಿ ಅಂಬೆಕಲ್ಲುhttp://sakshatkara.com/
ಪ್ರತಿಯೊಬ್ಬರ ಬದುಕಿನಲ್ಲಿಯೂ ಆಧ್ಯಾತ್ಮಿಕ ವಿಚಾರಧಾರೆಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ. ಆಧ್ಯಾತ್ಮಿಕ ವಿಚಾರಧಾರೆಗಳು ಅಂದಾಕ್ಷಣ ಅದು ಧರ್ಮವೊಂದಕ್ಕೆ ಮಾತ್ರ ಸೀಮಿತಗೊಂಡುದುದಲ್ಲ. ಎಲ್ಲರ ಬದುಕಿನ ಭಾಗವೂ ಹೌದು. ಮನಸ್ಸಿನ ಸಮತೋಲನಕ್ಕೆ ಯೋಗ, ಧ್ಯಾನ ಹೇಗೆ ಸಹಕಾರಿಯೋ ಹಾಗೆಯೇ ಪ್ರಾರ್ಥನೆ, ದೇವರಪೂಜೆ, ವ್ರತಾಚರಣೆಗಳು, ಹಬ್ಬಗಳು ಮನುಕುಲದ ಬಾಂಧವ್ಯವೃದ್ಧಿಗೆ ಸಹಕಾರಿ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಯನ್ನು ಪಸರಿಸುವ ಸಣ್ಣ ಪ್ರಯತ್ನ. ನೀವು ಕೂಡಾ ನಿಮಗೆ ತಿಳಿದಿರುವ ದೇಗುಲ, ಯೋಗಕೇಂದ್ರ, ಮಠ-ಮಂದಿರಗಳ ಪರಿಚಯಾತ್ಮಕ ಲೇಖನ, ಹಬ್ಬ, ವ್ರತಾಚರಣೆಗಳ ಮಹತ್ವ, ಯೋಗ, ಧ್ಯಾನ ಕ್ರಮಗಳು, ಆಧ್ಯಾತ್ಮಿಕ ಅರಿವು ಮೂಡಿಸುವ ನಿಟ್ಟಿನಲ್ಲಿ ಯಾವುದೇ ಲೇಖನಗಳು, ಆಯುರ್ವೇದ, ಮನೆ ಮದ್ದು ಬರಹಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles