ಮಧುಮೇಹಕ್ಕೆ ರಾಮಬಾಣ ಈ ಬಳ್ಳಿ

ಪ್ರಕೃತಿಯ ಮಡಿಲಲ್ಲಿ ಹಲವಾರು ಔಷಧೀಯ ಸಸ್ಯಗಳು ಕಂಡುಬರುತ್ತವೆ. ಅಂತಹ ಮೂಲಿಕೆಗಳಲ್ಲಿಅಮೃತ ಬಳ್ಳಿ ಮಹತ್ವದ ಸ್ಥಾನ ಪಡೆದಿದೆ. ಇದರ ಔಷಧೀಯ ಗುಣಗಳನ್ನು ನೋಡಿ ನಮ್ಮ ಪೂರ್ವಜರು ಇದನ್ನು “ಅಮೃತ ಬಳ್ಳಿ” ಎಂದು ಕರೆದಿದ್ದಾರೆ. ಅಮೃತ ಬಳ್ಳಿ ಮೂಲಿಕೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಅಂತಹ ರೋಗಾಣುಗಳ ವಿರುದ್ಧ ಹೊರಡುವ ಸಾಮರ್ಥ್ಯ ಹೊಂದಿದೆ ಎಂದು.

“ಅಮೃತ ಬಳ್ಳಿ” ಇದೊಂದು ಉತ್ತಮ ಆರೋಗ್ಯ ವ್ರದ್ದಿಸುವ ಔಷಧೀಯ ಗಿಡಮೂಲಿಕೆಯಾಗಿದೆ. ಇದರ ಸೇವನೆಯಿಂದ ಆರೋಗ್ಯದಲ್ಲಿ ವಿಶೇಷವಾದ ಬದಲಾವಣೆಗಳನ್ನುಕಾಣಬಹುದಾಗಿದೆ.

ಪ್ರಯೋಜನಗಳು: ಅಮೃತ ಬಳ್ಳಿಯು ಇನೇಕ ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದರಿಂದ ರೋಗನಿರೋಧಕ ಶಕ್ತಿ, ಸಂಧಿವಾತ ಶಮನ, ಜ್ವರದ ನಿವಾರಣೆಗಳಂತಹ ಅನೇಕ ಉಪಕಾರಿ ಗುಣಗಳನ್ನು ಹೊಂದಿದೆ.

ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾದೊಂದಿಗೆ ಸಹ ಹೋರಾಡುತ್ತದೆ. ಇದರ ಸೇವನೆಯಿಂದ ಯಕೃತ್ತಿನ ರೋಗಗಳು ಮತ್ತು ಮೂತ್ರದ ಸೋಂಕುಗಳನ್ನು ದೂರಮಾಡಿಕೊಳ್ಳಬಹುದು.

ದೀರ್ಘಕಾಲದ ಜ್ವರ ಶಮನಗೊಳಿಸುತ್ತದೆ : ಅಮೃತ ಬಳ್ಳಿಯ ಇನ್ನೊಂದು ಪ್ರಯೋಜನವೆಂದರೆ ಅದು ತೀವ್ರವಾದ ಜ್ವರ ಮತ್ತು ರೋಗಗಳನ್ನು ನಿವಾರಿಸುತ್ತದೆ. ಇದು ನಿಮ್ಮ ರಕ್ತ ಪ್ಲೇಟ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಅಮೃತ ಬಳ್ಳಿಯ ರಸವನ್ನು ಸ್ವಲ್ಪ ಪ್ರಮಾಣವನ್ನು ತೆಗೆದುಕೊಂಡು ಅದನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಮಲೇರಿಯಾವನ್ನು ತಡೆಗಟ್ಟಬಹುದು. ಅಮೃತ ಬಳ್ಳಿಯು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಕಾಳಜಿ ಮಾಡುತ್ತದೆ.

ಅಮೃತ ಬಳ್ಳಿಯ ರಸವನ್ನು ಮಜ್ಜಿಗೆ ಜೊತೆಗೆ ತೆಗೆದುಕೊಳ್ಳಬಹುದು. ಅಮೃತ ಬಳ್ಳಿಯ ಪುಡಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ, ಸೋಸಿ ಕಷಾಯದ ರೂಪದಲ್ಲಿಯೂ ತೆಗೆದುಕೊಳ್ಳಬಹುದು. ಮೂಲವ್ಯಾಧಿಯಿಂದ ಬಳಲುತ್ತಿರುವ ರೋಗಿಗಳು ಬಳಸಬಹುದು. ಸಂಕ್ಷಿಪ್ತವಾಗಿ, ಅಮೃತ ಬಳ್ಳಿಯು ಮನಸ್ಸನ್ನು ಸಡಿಲಗೊಳಿಸುತ್ತದೆ ಮತ್ತು ಅಜೀರ್ಣವನ್ನು ತಡೆಯುತ್ತದೆ.

ಇದು ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಮಧುಮೇಹ ರೋಗಿಗಳು ಇದರ ರಸವನ್ನೂ ಸಹ ತೆಗೆದುಕೊಳ್ಳಬಹುದು. ಇದು ಮಾನಸಿಕ ಒತ್ತಡ ಮತ್ತು ಆತಂಕ ಎರಡನ್ನೂ ಕಡಿಮೆ ಮಾಡುತ್ತದೆ.

ಆಸ್ತಮಾಕ್ಕೆ ರಾಮಬಾಣ: ಆಸ್ತಮಾದಿಂದ ಎದೆ ಬಿಗಿತ, ಉಸಿರಾಟದ ತೊಂದರೆ, ಕೆಮ್ಮು, ಉಬ್ಬಸ ಇತ್ಯಾದಿಗಳನ್ನು ಉಂಟುಮಾಡುತ್ತದೆ. ಆಸ್ತಮಾ ರೋಗಲಕ್ಷಣಗಳನ್ನು ಕಡಿಮೆ ಮಾಡಲು ತೆಗೆದುಕೊಳ್ಳಬಹುದು.

ಸಂಗ್ರಹ: ಹೆಚ್.ಎಸ್.ರಂಗರಾಜನ್

Related Articles

ಪ್ರತಿಕ್ರಿಯೆ ನೀಡಿ

Latest Articles