ನಮ್ಮ ತಾತ್ತ್ವಿಕ ನೆಲೆಗಟ್ಟು ಯಾವುದು? ಓದಿ ‘ಭಾರತೀಯ ದರ್ಶನ’

ಬಹಳಷ್ಟು ಸಂದರ್ಭಗಳಲ್ಲಿ ದೊಡ್ಡ ದೊಡ್ಡ ವಿದ್ವಾಂಸರು, ಗುರೂಜಿಗಳು, ಸ್ವಾಮೀಜಿಗಳು ‘ಎಲ್ಲ ಮತಗಳೂ ಬೋಧಿಸಿದ್ದು ಸತ್ಯ, ಶಾಂತಿ, ಅಹಿಂಸೆಯನ್ನೇ. ಎಲ್ಲ ಮತಗಳ ಸಾರವೂ ಒಂದೇ’ ಎಂಬಂತಹ ಮಾತುಗಳನ್ನು ಆಡುವುದನ್ನು ಕೇಳುತ್ತೇವೆ. ಇದು ರಾಜಕಾರಣಿಯ ಮಾತು; ಸತ್ಯವನ್ನು ಮರೆಮಾಚಿ ಎದುರಿರುವವರನ್ನೆಲ್ಲ ಓಲೈಸಿ- ಮೆಚ್ಚಿಸಿ, ಚಪ್ಪಾಳೆ ಗಿಟ್ಟಿಸಿಕೊಳ್ಳುವ ತಂತ್ರ!

ಇಂದಿನ ಸೆಕ್ಯೂಲರಿಸಮ್ಮು ಇಂತಹುದೊಂದು ಅಪ್ಪಟ ಸುಳ್ಳನ್ನು ಹೇಳಿ, ನಮ್ಮನ್ನು ನಂಬಿಸಿಬಿಟ್ಟಿದೆ. ಹಾಗಾದರೆ ವಾಸ್ತವ ಏನು? ಸನಾತನಧರ್ಮದ ಹಲವು ಕವಲುಗಳಾಗಿ ಹುಟ್ಟಿರುವ ಭಾರತೀಯ ಮತಗಳಲ್ಲಿ ಬಹಳಷ್ಟು ಸಾಮ್ಯಗಳಿವೆ, ನಿಜ. ಆದರೆ ಅಭಾರತೀಯ ಸೆಮೆಟಿಕ್ ಮತಗಳಿಗೂ ಅವುಗಳ ಬೋಧನೆಗಳಿಗೂ ನಮ್ಮ ಮತ ಧರ್ಮಗಳಿಗೂ ಸಾಮ್ಯತೆಯೇನೂ ಇಲ್ಲ.

ಉದಾ: ‘ದೇವನೊಬ್ಬ ನಾಮ ಹಲವು’ ಎಂಬುದು ನಮ್ಮ ಮೂಲ ತಾತ್ತ್ವಿಕ ನೆಲೆಗಟ್ಟಾದರೆ, ಇದಕ್ಕೆ ತದ್ವಿರುದ್ಧವಾದ ತಳಹದಿಯ ಮೇಲೆ ನಿಂತಿರುವಂಥವು ಅಭಾರತೀಯ ಸೆಮೆಟಿಕ್ ಮತಗಳು! ಹಾಗಾಗಿ ಎಲ್ಲ ಮತಗಳ ಬೋಧನೆಯೂ ಒಂದೇ! ಎನ್ನುವುದು ನಮ್ಮನ್ನು ನಾವು ವಂಚಿಸಿಕೊಳ್ಳುವ ಮಾತು. ನಾವಿಂದು ಇಂಥ ರಾಜಕಾರಣದ ಪರಿಭಾಷೆಗಳಿಂದ, ಹೇಳಿಕೆಗಳಿಂದ ತಪ್ಪಿಸಿಕೊಳ್ಳಬೇಕಾಗಿದೆ. ಅದಕ್ಕೆ ನಮಗೆ ಸಹಕಾರಿಯಾಗುವಂಥವು ಭಾರತೀಯ – ದರ್ಶನ ದಂಥ ಗ್ರಂಥಗಳು. ಅವುಗಳ ಓದು ನಮಗೆ ‘ನಮ್ಮ ತಾತ್ತ್ವಿಕ ನೆಲೆಗಟ್ಟು ಯಾವುದು? ಅದು ಎಷ್ಟು ವ್ಯಾಪಕವೂ ಸಾರ್ವತ್ರಿಕವೂ ಆದದ್ದು? ಅದು ಇಂದಿಗೂ ಎಷ್ಟುಮಟ್ಟಿಗೆ ಭದ್ರವಾಗಿದೆ?’ ಈ ಮೊದಲಾದ ಸಂಗತಿಗಳನ್ನು ಮನದಟ್ಟು ಮಾಡಿಸುತ್ತದೆ.

#ಭಾರತೀಯ ದರ್ಶನ, ಒಟ್ಟು 816 ಪುಟಗಳ ಪುಸ್ತಕ. ಬೆಲೆ: ರೂ. 700.

ಆಸಕ್ತರು ಪುಸ್ತಕವನ್ನು ಖರೀದಿಸಲು WhatsApp ಮಾಡಿ: 74836 81708

Related Articles

ಪ್ರತಿಕ್ರಿಯೆ ನೀಡಿ

Latest Articles