ಅರಶಿಣ ಬೆರೆಸಿದ ಹಾಲು – ಪ್ರಯೋಜನಗಳು ಹಲವು

ದೇಹದ ಆರೋಗ್ಯಕ್ಕೆ ಹಾಲು ಸೇವನೆ ಬಹಳ ಅಗತ್ಯ. ನಿತ್ಯ ಹಾಲು ಕುಡಿಯುವುದಿರಂದ ದೇಹಕೆ ಬೇಕಾದ ಕ್ಯಾಲ್ಶಿಯಂ ದೊರೆಯುತ್ತದೆ. ಹೀಗೆ ದಿನನಿತ್ಯ ಬರೀ ಹಾಲನ್ನು ಕುಡಿಯುವ ಬದಲು ಅದಕ್ಕೆ ಸ್ವಲ್ಪ ಅರಶಿನ ಪುಡಿಯನ್ನು ಸೇರಿಸಿ ಸೇವನೆ ಮಾಡುವುದರಿಂದ ದೇಹದ ಆರೋಗ್ಯ, ತ್ವಚೆಯ ಕಾಂತಿ ಕೂಡಾ ಹೆಚ್ಚುವುದು.

ನಮ್ಮ ಮನೆಯಲ್ಲಿ ಪ್ರತಿನಿತ್ಯ ಬಳಕೆಯಲ್ಲಿರುವ ರೋಗನಿರೋಧಕ ಶಕ್ತಿಯುಳ್ಳ ಪದಾರ್ಥ ಅಂದರೆ ಅರಶಿಣ. ಆಯುರ್ವೇದದಲ್ಲಿ ಅರಶಿಣಕ್ಕೆ ಬಹಳ ಪ್ರಾಮುಖ್ಯತೆಯಿದೆ. ಇದನ್ನು ನಿಯತವಾಗಿ ಬಳಸುವುದರಿಂದ ಸಾಮಾನ್ಯವಾಗಿ ಕಂಡುಬರುವ ಹಲವು ಆರೋಗ್ಯಸಂಬಂಧಿ ತೊಂದರೆಗಳಿಂದ ದೂರವಿರಬಹುದು.  ರಕ್ತಶುದ್ಧೀಕರಣದಲ್ಲಿ ಇದು ಮುಖ್ಯವಾದುದು.

* ಗಾಯಗೊಂಡಾಗ ಆ ಜಾಗಕ್ಕೆ ಸ್ವಲ್ಪ ಅರಶಿಣವನ್ನು ಹಚ್ಚಿದರೆ ಗಾಯದ ರಕ್ತಸ್ರಾವ ಕಡಿಮೆಯಾಗುತ್ತದೆ. ರಾತ್ರಿ ಊಟದ ನಂತರ ಮಲಗುವ ಮುನ್ನ ಉಗುರುಬೆಚ್ಚಗಿನ ಒಂದು ಲೋಟ ಹಾಲಿಗೆ ಅರಶಿಣ ಬೆರೆಸಿ ಕುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ. ಅರಶಿಣಮಿಶ್ರಿತ ಹಾಲನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಬಹುದು. ಪ್ರತಿದಿನ ಬೆಳಗ್ಗೆ ಒಂದು ಲೋಟ ಹಾಲಿಗೆ ಅರ್ಧ ಚಮಚ ಅರಿಶಿಣ ಬೆರೆಸಿ ಕುಡಿಯುವುದರಿಂದ ದೇಹದ ಹೆಚ್ಚುವರಿ ಕೊಬ್ಬಿನ ಸಂಗ್ರಹವು ಕ್ರಮೇಣ ಕಡಿಮೆಯಾಗುತ್ತದೆ. ಅರಿಶಿಣ ಬೆರೆಸಿದ ಹಾಲಿನ ಸೇವನೆಯಿಂದ ಸಾಮಾನ್ಯ ಶೀತ ಹಾಗೂ ಕೆಮ್ಮಿನ ಸಮಸ್ಯೆಗಳು ಗುಣವಾಗುತ್ತವೆ. ಚಳಿಗಾಲದಲ್ಲಿ ಇದರ ಬಳಕೆಯು ಆರೋಗ್ಯದ ದೃಷ್ಟಿಯಿಂದ ಉತ್ತಮ.

*ಮೂಳೆ ಸಮಸ್ಯೆಗಳನ್ನು ನಿವಾರಿಸುವಲ್ಲಿ ಅರಶಿಣ ಮಿಶ್ರಿತ ಹಾಲಿನ ಸೇವನೆ ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಅರಶಿಣದ ಅಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

* ಗರ್ಭಿಣಿಯರ ಆರೋಗ್ಯಕ್ಕೆ ಅರಶಿನ ಮಿಶ್ರಿತ ಹಾಲು ಸೇವನೆ ಒಳ್ಳೆಯದು.


* ಅರಶಿಣ ಬೆರೆಸಿದ ಹಾಲಿನ ಸೇವನೆಯು ಸಂಧಿವಾತವನ್ನು ಮತ್ತು ಅದಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕೀಲು ಮತ್ತು ಸ್ನಾಯುಗಳ ನೋವುಗಳನ್ನೂ ಕಡಿಮೆ ಮಾಡುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles